×
Ad

ಕಂಬಳ ಉಳಿಸಲು ರಾಜ್ಯ ಸರಕಾರಕ್ಕೆ ಕೇಂದ್ರದಿಂದ ಪೂರ್ಣ ಸಹಕಾರ : ರವಿಶಂಕರ ಪ್ರಸಾದ್

Update: 2017-01-25 18:54 IST

ಮಂಗಳೂರು.ಜ.25:  ಕರಾವಳಿಯ ಪುರಾತನ ಸಂಸ್ಕೃತಿಯ ಭಾಗವಾದ ಕಂಬಳವನ್ನು ಉಳಿಸಬೇಕೆಂಬ ಜನರ ಬೇಡಿಕೆಯಂತೆ ಕರ್ನಾಟಕ ಸರಕಾರ ವಿಶೇಷ ಆದೇಶವನ್ನು ಮಾಡಲು ಬಯಸಿ ಕೇಂದ್ರದ ಬೆಂಬಲವನ್ನು ಕೋರಿದರೆ ಕೇಂದ್ರದಿಂದ ಸಹಕಾರ ನೀಡುವುದಾಗಿ ಕೇಂದ್ರ ಮಾಹಿತಿ ತಂತ್ರಜ್ಞಾನ, ಕಾನೂನು ಸಚಿವ ರವಿಶಂಕರ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಅಲ್ಲಿನ ಜಲ್ಲಿಕಟ್ಟು ಕ್ರೀಡೆಯನ್ನು ಉಳಿಸಿಲು ತಮಿಳು ನಾಡು ಸರಕಾರ ಕೈಗೊಂಡ ಕ್ರಮದ ಮಾದರಿಯಲ್ಲಿ ಕರ್ನಾಟಕ ಸರಕಾರವೂ ಕಂಬಳವನ್ನು ಉಳಿಸಲು ಕೈ ಗೊಳ್ಳುವ ಕ್ರಮಗಳಿಗೆ ಕೇಂದ್ರ ಸರಕಾರ ಬೆಂಬಲ ನೀಡಲಿದೆ ಎಂದು ರವಿಶಂಕರ ಪ್ರಸಾದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News