×
Ad

‘ಇನ್‌ಲ್ಯಾಂಡ್ ಎಪಿರಾನ್’ ವಸತಿ ಸಮುಚ್ಚಯಕ್ಕೆ ಶಿಲಾನ್ಯಾಸ

Update: 2017-01-25 19:17 IST

 ಮಂಗಳೂರು, ಜ.23: ನಗರದ ಬಂಟ್ಸ್ ಹಾಸ್ಟೆಲ್ ಸಮೀಪದ ಪಿಂಟೋಸ್ ಲೇನ್‌ನಲ್ಲಿ ಇನ್‌ಲ್ಯಾಂಡ್ ಸಂಸ್ಥೆಯ ವತಿಯಿಂದ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ವಸತಿ ಸಮುಚ್ಚಯ ‘ಇನ್‌ಲ್ಯಾಂಡ್ ಎಪಿರಾನ್’ಗೆ ಇಂದು ಶಿಲಾನ್ಯಾಸ ನೆರವೇರಿತು.

ನಗರದ ರಾಧಾಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ಗಿರಿಧರ್ ಭಟ್, ಬಂದರ್‌ನ ಅಝ್ಹರಿಯಾ ಮದ್ರಸದ ಯಹ್ಯಾ ಮದನಿ ಹಾಗೂ ಬಿಜೈ ಚರ್ಚ್‌ನ ಧರ್ಮಗುರು ಫಾ.ವಿಲ್ಸನ್ ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್, ನಿರ್ದೇಶಕ ಮಿರಾಜ್ ಯೂಸುಫ್, ಪ್ರೊಜೆಕ್ಟ್ ಎಂಜಿನಿಯರ್ ರಾಹುಲ್ ಶೆಟ್ಟಿ, ಎಂಜಿನಿಯರ್ ಸುರೇಶ್ ಪೈ, ಸ್ಟ್ರಕ್ಚರಲ್ ಎಂಜಿನಿಯರ್ ಅನಿಲ್ ಹೆಗ್ಡೆ, ಸೇಲ್ಸ್ ಮ್ಯಾನೇಜರ್ ಉಲ್ಲಾಸ್ ಕದ್ರಿ, ಕ್ರೆಡೈನ ಮಾಜಿ ಅಧ್ಯಕ್ಷ ಪುಷ್ಪರಾಜ್ ಜೈನ್, ರೋಹನ್ ಮೊಂತೆರೊ, ವಿಶ್ವಾಸ್ ಬಾವ ಬಿಲ್ಡರ್ಸ್‌ನ ಅಬ್ದುಲ್ ರವೂಫ್ ಪುತ್ತಿಗೆ, ಜಯಪ್ರಕಾಶ್ ತುಂಬೆ ಮೊದಲಾದವರು ಉಪಸ್ಥಿತರಿದ್ದರು.

ಏಳು ಅಂತಸ್ತುಗಳ ಈ ಉದ್ದೇಶಿತ ಸಮುಚ್ಚಯದಲ್ಲಿ 29 ಫ್ಲಾಟ್‌ಗಳು ಹೊಂದಲಿವೆ. 2 ಬಿಎಚ್‌ಕೆ, 2 ಬಿಎಚ್‌ಕೆ+ ಸ್ಟಡಿ ರೂಮ್ ಹಾಗೂ 3 ಬಿಎಚ್‌ಕೆಗಳ ಫ್ಲಾಟ್‌ಗಳು ನೂತನ ಸಮುಚ್ಚಯದಲ್ಲಿ ನಿರ್ಮಾಣಗೊಳ್ಳಲಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಸಿರಾಜ್ ಅಹ್ಮದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News