×
Ad

ಜ.26ರಿಂದ ಉಳ್ಳಾಲ ತಂಙಳ್, ಎಂ.ಎ.ಉಸ್ತಾದ್‌ರ ಆಂಡ್ ನೇರ್ಚೆ

Update: 2017-01-25 19:56 IST

ಮಂಗಳೂರು, ಜ.25: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಹಾಗೂ ಜಾಮಿಅ ಸಅದಿಯ್ಯದ ಸಾರಥಿಯಾಗಿದ್ದ ತಾಜುಲ್ ಉಲಮಾ ಸಯ್ಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಉಳ್ಳಾಲ ತಂಙಳ್ ಮತ್ತು ನೂರುಲ್ ಉಲಮಾ ಎಂ.ಎ.ಅಬ್ದುಲ್ ಖಾದರ್ ಮುಸ್ಲಿಯಾರ್ ಅವರ ಆಂಡ್ ನೇರ್ಚೆ ಕಾರ್ಯಕ್ರಮವು ಜ.26ರಿಂದ 28ರವರೆಗೆ ಕಾಸರಗೋಡಿನ ದೇಳಿ ಜಾಮಿಅ ಸಅದಿಯ್ಯದಲ್ಲಿ ನಡೆಯಲಿದೆ ಎಂದು ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಸಿದ್ದೀಕ್ ಮೋಂಟುಗೋಳಿ ತಿಳಿಸಿದ್ದಾರೆ.
 

 ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 26ರಂದು ಬೆಳಗ್ಗೆ 7 ಗಂಟೆಗೆ ಎಟ್ಟಿಕ್ಕುಳಂ ತಾಜುಲ್ ಉಲಮಾ ಮಖಾಂ ಝಿಯಾರತ್‌ಗೆ ಸಯ್ಯದ್ ಹಾಮಿದ್ ಇಂಬಿಚ್ಚಿ ಕೋಯಮ್ಮ ತಂಙಳ್ ಕೊಯಿಲಾಂಡಿ ನೇತೃತ್ವ ವಹಿಸಲಿದ್ದಾರೆ. 10:30ಕ್ಕೆ ಕುಟುಂಬ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲಟ್ರ ಮಾಹಿನ್ ಹಾಜಿ ವಹಿಸಲಿದ್ದಾರೆ. ಕೆ.ಎಸ್.ಆಟಕೋಯ ತಂಙಳ್ ಕುಂಬೋಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮನಶಾಸ್ತ್ರಜ್ಞ ಡಾ.ಮುಹ್ಸಿನ್ ತರಬೇತಿ ಶಿಬಿರದ ನೇತೃತ್ವ ವಹಿಸಲಿದ್ದಾರೆ ಎಂದರು.

ಜ.28ರಂದು ಬೆಳಗ್ಗೆ 11 ಗಂಟೆಗೆ ಸಅದಿ ಸಂಗಮ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ನಡೆಯುವ ಪಂಡಿತ ಸಂಗಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ನೇತೃತ್ವ ನೀಡಲಿದ್ದಾರೆ. ಎ.ಪಿ.ಅಬ್ದುಲ್ಲಾ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸುವರು.

ಸಯ್ಯದ್ ಕುಂಞಿ ಕೋಯ ತಂಙಳ್ ಮುಟ್ಟಂ, ಸಯ್ಯಿದ್ ತಯ್ಯಿಬುಲ್ ಬುಖಾರಿ, ಸಯ್ಯದ್ ಅಶ್ರಫ್ ಅಸ್ಸಖಾಫ್ ತಂಙಳ್ ಅದೂರ್, ಕೆ.ಕೆ.ಹುಸೈನ್ ಬಾಖವಿ, ಬೆಳ್ಳಿಪಾಡಿ ಅಬ್ದುಲ್ಲ ಮುಸ್ಲಿಯಾರ್, ಮುಹಮ್ಮದಾಲಿ ಸಖಾಫಿ ತೃಕರಿಪ್ಪುರ್, ಸಿ.ಅಬ್ದುಲ್ಲಾಹ್ ಮುಸ್ಲಿಯಾರ್ ಉಪ್ಪಳ, ಪಿ.ಕೆ.ಅಬೂಬಕರ್ ವೌಲವಿ, ಬಿ.ಎಸ್.ಅಬ್ದುಲ್ಲಾಹ್ ಕುಂಞಿ ಫೈಝಿ, ಉಬೈದುಲ್ಲಾಹ್ ಸಅದಿ, ಅಶ್ರಫ್ ಸಅದಿ ಮಲ್ಲೂರು ಭಾಗವಹಿಸಲಿದ್ದಾರೆ.

ಸಂಜೆ 4 ಗಂಟೆಗೆ ನಡೆಯುವ ಖತ್‌ಮುಲ್ ಕುರ್‌ಆನ್ ಪ್ರಾರ್ಥನೆಗೆ ಸಮಸ್ತ ಕೇಂದ್ರ ಮುಶಾವರದ ಸದಸ್ಯ ಸಯ್ಯದ್ ಹಾಮಿದ್ ಕೋಯಮ್ಮ ತಂಙಳ್ ಮಾಟ್ಟೂಲ್ ನೇತೃತ್ವ ವಹಿಸಲಿದ್ದಾರೆ ಎಂದು ಸಿದ್ದೀಕ್ ಮೋಂಟುಗೋಳಿ ವಿವರಿಸಿದರು. ಸಂಜೆ 5 ಗಂಟೆಗೆ ಸಮಾರೋಪ ನಡೆಯಲಿದ್ದು, ಸಯ್ಯದ್ ಅಲಿ ಬಾಖವಿ ತಂಙಳ್ ಪ್ರಾರ್ಥನೆಯೊಂದಿಗೆ ಸಅದಿಯ್ಯ ಅಧ್ಯಕ್ಷ ಕುಂಬೋಲ್ ಸಯ್ಯಿದ್ ಕೆ.ಎಸ್.ಆಟಕ್ಕೋಯ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಸ್ತ ಅಧ್ಯಕ್ಷ ಸುಲೈಮಾನ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಖಮರುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಭಾಷಣ ಗೈಯಲಿದ್ದಾರೆ ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಚಿವ ಯು.ಟಿ.ಖಾದರ್, ಸ್ವಾಗತ ಸಮಿತಿಯ ಅಧ್ಯಕ್ಷ ಸಯ್ಯದ್ ಪಿ.ಎಸ್.ಆಟ್ಟಕ್ಕೋಯ ತಂಙಳ್ ಬಾಹಸನ್, ಜಂಇಯ್ಯತುಲ ಉಲಮಾ ರಾಜ್ಯ ಉಪಾಧ್ಯಕ್ಷ ಯು.ಕೆ.ಮುಹಮ್ಮದ್ ಸಅದಿ ಒಳವೂರು, ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ ಎಂಪಿಎಂ ಅಶ್ರಫ್ ಸಅದಿ ಮಲ್ಲೂರು, ದ.ಕ. ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಕಿನಾರ, ಬೆಂಗಳೂರು ಸಅದಿಯ್ಯೋ ಫೌಂಡೇಶನ್‌ನ ಮ್ಯಾನೇಜರ್ ಕೆ.ಎಚ್.ಇಸ್ಮಾಯೀಲ್ ಸಅದಿ ಕಿನ್ಯ , ಮಂಗಳೂರು ಸಅದಿಯ್ಯ ಕಮಿಟಿಯ ಅಧ್ಯಕ್ಷ ಬಾವ ಹಾಜಿ ತಲಪ್ಪಾಡಿ, ವಕ್ಫ್‌ಬೋರ್ಡ್ ಸಲಹಾ ಸಮಿತಿಯ ಸದಸ್ಯ ಮುಹಿಯುದ್ದೀನ್ ಅಲ್ ಸಫರ್, ಸುಹೈಲ್ ಕಂದಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News