ರಾಜ್ಯ ಮಟ್ಟದ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ಉಜಿರೆಯ ಭಾರ್ಗವಿ ಶಬರಾಯ ಆಯ್ಕೆ
Update: 2017-01-25 21:19 IST
ಬೆಳ್ತಂಗಡಿ , ಜ.25 : ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು , ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ವತಿಯಿಂದ ಪ್ರಥಮ ಬಾರಿ ಫೆ. 9 ಮತ್ತು 10 ರಂದು ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ರಾಜ್ಯ ಮಟ್ಟದ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ಉಜಿರೆ ಶ್ರೀ ಧ.ಮಂ.ಆಂಗ್ಲ ಮಾಧ್ಯಮ ಶಾಲೆಯ ಹತ್ತನೆಯ ತರಗತಿ ವಿದ್ಯಾರ್ಥಿ ಭಾರ್ಗವಿ ಶಬರಾಯ ಆಯ್ಕೆಯಾಗಿದ್ದಾರೆ.
ಸಹ ಸಮ್ಮೇಳನಾಧ್ಯಕ್ಷರಾಗಿ ಹಾಸನದ ವಿವೇಕ್ ಎಚ್.ಎಸ್., ಬಾಗಲಕೋಟೆಯ ಗೌರಮ್ಮ, ಬೆಳ್ತಂಗಡಿ ಶ್ರೀ ಧ.ಮಂ.ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅನನ್ಯ, ತುಮಕೂರಿನ ಸುಬ್ರಹ್ಮಣ್ಯ ನಾವಡ ಆಯ್ಕೆಯಾಗಿದ್ದಾರೆ.
ಭಾರ್ಗವಿ ಶಬರಾಯ ಉಜಿರೆ ಓಡಲದ ಪದ್ಮನಾಭ ಶಬರಾಯ ಹಾಗೂ ಭಾನುಮತಿ ಅವರ ಪುತ್ರಿ.