×
Ad

ಬೀಡಿ ಕಾರ್ಮಿಕರು ಗುತ್ತಿಗೆದಾರರಿಗೆ ನಗದು ನೀಡಲು ಬಿ.ಎಚ್.ಖಾದರ್ ಒತ್ತಾಯ

Update: 2017-01-25 22:03 IST

ಮಂಗಳೂರು, ಜ.25: ಅವಿಭಜಿತ ದ.ಕ.ಜಿಲ್ಲೆಯಲ್ಲಿ ಮಹಿಳೆಯರು ಬೀಡಿಯನ್ನೇ ಅವಲಂಬಿಸಿದ್ದಾರೆ. 500 ಮತ್ತು 1,000 ರ ನೋಟು ಅಮಾನ್ಯದಿಂದ ಬೀಡಿ ಕಾರ್ಮಿಕರಿಗೆ ತುಂಬಾ ತೊಂದರೆಯಾಗಿದೆ.

ಈ ಮಧ್ಯೆ ಬೀಡಿ ಕಾರ್ಮಿಕರು ತಮ್ಮ ಮಜೂರಿಯನ್ನು ಬ್ಯಾಂಕ್ ಖಾತೆಯ ಮೂಲಕ ಪಡೆಯಲು ಸೂಚಿಸಿರುವುದರಿಂದ ಲಕ್ಷಾಂತರ ಬೀಡಿ ಕಾರ್ಮಿಕರು ಮತ್ತು ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹುತೇಕ ಬೀಡಿ ಕಾರ್ಮಿಕರಿಗೆ ಬ್ಯಾಂಕ್ ಖಾತೆಯೇ ಇಲ್ಲ. ಹೆಚ್ಚಿನವರು ಖಾತೆ ತೆರಯಲಾಗದ ಸ್ಥಿತಿಯಲ್ಲಿದ್ದಾರೆ. ಅಲ್ಲದೆ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದರೂ ಅದನ್ನು ಪಡೆಯಲು ಆಗಾಗ ಬ್ಯಾಂಕ್‌ಗೆ ಅಲೆದಾಡಬೇಕಾಗಿದೆ. ಇದರಿಂದ ದಿನದ ಹೆಚ್ಚಿನ ಸಮಯವನ್ನು ಬ್ಯಾಂಕ್‌ಗೆ ಹೋಗಿ ಬರುವುದಕ್ಕೆ ವ್ಯಯವಾಗುತ್ತದೆ. ಇದರಿಂದ ಮಹಿಳೆಯರು ಕುಟುಂಬದ ನಿರ್ವಹಣೆ ಮಾಡುವುದು ಅಸಾಧ್ಯವಾಗಿದೆ. ಹಾಗಾಗಿ ಬೀಡಿ ಕಾರ್ಮಿಕರಿಗೆ ಮತ್ತು ಗುತ್ತಿಗೆದಾರರಿಗೆ ನಗದು ವ್ಯವಸ್ಥೆ ಕಲ್ಪಿಸಿಕೊಡುವಂತೆ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್.ಖಾದರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News