ಕೊರಗ ಸಮುದಾಯದ ನಿರುದ್ಯೋಗಿಗಳಿಗೆ ಭತ್ತೆ
Update: 2017-01-25 23:59 IST
ಮಂಗಳೂರು, ಜ.25: ದ.ಕ. ಜಿಲ್ಲೆಯಲ್ಲಿ ವಾಸಿಸುತ್ತಿರುವ ಮೂಲನಿವಾಸಿ ಕೊರಗ ಸಮುದಾಯದ ನಿರುದ್ಯೋಗಿ ಯುವಕ-ಯುವತಿಯರಿಗೆ 2 ವರ್ಷಗಳ ಅವಧಿಗೆ ಪ್ರತೀ ತಿಂಗಳು ಸ್ಟೈಫಂಡ್ ನೀಡಲಾಗು ವುದು.
ಪಿಯುಸಿ ತೇರ್ಗಡೆಯಾದವರಿಗೆ 1,500 ರೂ., ಪದವೀಧರರಿಗೆ 2,000 ರೂ., ಸ್ನಾತಕೋತ್ತರರಿಗೆ 2,500 ರೂ. ನಿರುದ್ಯೋಗ ಭತ್ತೆ ನೀಡಲಾಗುವುದು. ಅರ್ಹ ಕೊರಗ ಸಮುದಾಯದ ನಿರುದ್ಯೋಗಿ ಅಭ್ಯರ್ಥಿಗಳು ಆಯಾ ತಾಲೂಕಿನ ಸಮಾಜ ಕಲ್ಯಾಣ ಇಲಾಖಾ ಕಚೇರಿಯ ಸಹಾಯಕ ನಿರ್ದೇಶಕ ರಿಂದ (ಗ್ರೇಡ್-12) ಪಡೆದು ಜ.28ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟನೆ ತಿಳಿಸಿದೆ.