×
Ad

ಕಂಬಳ ಕೋಣಗಳ ಮಾಲಕ, ಪೋಷಕರ ಬೆಂಬಲ

Update: 2017-01-26 00:22 IST

ಬಂಟ್ವಾಳ, ಜ.25: ಕಂಬಳ ಉಳಿಸುವ ನಿಟ್ಟಿನಲ್ಲಿ ಜ.28ರಂದು ಮೂಡುಬಿದಿರೆಯಲ್ಲಿ ನಡೆಯುವ ಪಕ್ಷಾತೀತ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ಬಂಟ್ವಾಳ ತಾಲೂಕಿನ ಕಂಬಳ ಕೋಣಗಳ ಮಾಲಕರು, ಕಂಬಳ ಪೋಷಕರು, ತೀರ್ಪುಗಾರರು ಹಾಗೂ ಕಂಬಳಾಭಿಮಾನಿಗಳು ಘೋಷಿಸಿದ್ದಾರೆ.

ಬಿ.ಸಿ.ರೋಡ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಕಂಬಳದ ಪ್ರಧಾನ ತೀರ್ಪುಾರ ಎಡ್ತೂರು ರಾಜೀವ ಶೆಟ್ಟಿ ಹಾಗೂ ಕಂಬಳ ಜಿಲ್ಲಾ ಸಮಿತಿಯ ಮುಖಂಡ, ಕಂಬಳದ ಉಳಿವಿಗಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ಸೀತಾರಾಮ್ ಶೆಟ್ಟಿ ಬಂಟ್ವಾಳ ಮಾತನಾಡಿ, ಪ್ರಾಣಿ ಹಿಂಸೆ ನೆಪದಲ್ಲಿ ಪೇಟಾ ಸಂಸ್ಥೆ ಸುಳ್ಳು ಆರೋಪಗಳನ್ನು ಸೃಷ್ಟಿಸಿ ನ್ಯಾಯಾಲಯವನ್ನು ದಿಕ್ಕು ತಪ್ಪಿಸುತ್ತಿೆ.

ಕಂಬಳ ನಿಷೇಧದ ಹಿಂದೆ ಷಡ್ಯಂತ್ತರ ಅಡಗಿದೆ ಎಂದು ಶಂಕೆ ವ್ಯಕ್ತಪಡಿಸಿದರು. ಕಂಬಳವನ್ನು ಉಳಿಸುವಂತೆ ಕೇಂದ್ರ ಹಾಗೂ ಕರ್ನಾಟಕ ಸರಕಾರವನ್ನು ಒತ್ತಾಯಿಸಿ ಅವಿಭಜಿತ ಜಿಲ್ಲೆಯ ಸುಳ್ಯದಿಂದ ಬೈಂದೂರುವರೆಗೆ 300ಕ್ಕೂ ಹೆಚ್ಚು ಗ್ರಾಪಂಗಳು ಕೈಗೊಂಡ ನಿರ್ಣಯಗಳ ಪ್ರತಿಗಳ ‘ಕಂಬಳ ಉತ್ಸವ’ ಎಂಬ ಹೊತ್ತಗೆಯನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.

ಇದರ ಕನ್ನಡ ಪ್ರತಿಯನ್ನು ಈಗಾಗಲೇ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. ಇಂಗ್ಲಿಷ್ ಪ್ರತಿಯನ್ನು ಮಂಗಳೂರಿಗೆ ಆಗಮಿಸುವ ಕೇಂದ್ರ ಕಾನೂನು ಸಚಿವ ರವಿಶಂಕರ್‌ರಿಗೆ ಸಲ್ಲಿಸಲಾಗುವುದು ಎಂದರು. ಜ.30ರಂದು ಹೈಕೋರ್ಟ್‌ನಲ್ಲಿ ಕಂಬಳದ ಪರವಾಗಿ ತೀರ್ಪು ಬರುವ ಭರವಸೆಯಿದೆ. ವ್ಯತಿರಿಕ್ತ ತೀರ್ಪು ಬಂದಲ್ಲಿ ಸುಗ್ರೀವಾಜ್ಞೆ ತಂದಾದರೂ ಕಂಬಳ ನಿಷೇಧ ರದ್ದುಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಈಗಾಗಲೇ ಆಶ್ವಾಸನೆ ನೀಡಿದ್ದಾರೆ ಎಂದರು.

ಜಿಪಂ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ ಶೆಟ್ಟಿ, ಬಂಟ್ವಾಳ ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಕಂಬಳ ಕ್ಷೇತ್ರದ ಪ್ರಮುಖರಾದ ವಲೇರಿಯನ್ ಅಪ್ಪು ಡೇಸಾ, ಭ ಕ್ತಕುಮಾರ ಶೆಟ್ಟಿ, ಕ್ಲಾಡಿ ಡಿಸೋಜ, ಕೃಷ್ಣಾಪುರ ಪರಮೇಶ್ವರ ಸಾಲ್ಯಾನ್, ನಿರಂಜನ ರೈ ಮಠಂತಬೆಟ್ಟು, ಅವಿಲ್ ಮಿನೇಜಸ್, ಸತೀಶ್ಚಂದ್ರ ಸಾಲ್ಯಾನ್, ಬಾಲಕೃಷ್ಣ ಅಂಚನ್, ನವೀನ್ ಚಂದ್ರ ಆಳ್ವ ತಿರುವೈಲುಗುತ್ತು, ವಿವೇಕ್ ಪುರಸಭಾ ಸದಸ್ಯ ಸದಾಶಿವ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News