3.7 ಬಿಲಿಯನ್ ಡಾಲರ್‌ಗೆ ಸಿಸ್ಕೋಗೆ ತನ್ನ ಕಂಪನಿ ಮಾರಿದ ಭಾರತೀಯ ಟೆಕ್ಕಿ!
ಬೆಂಗಳೂರು, ಜ.26: ಬನ್ಸಾಲ್ ಹೆಸರಿನಲ್ಲೇ ಒಂದು ವೈಶಿಷ್ಟ್ಯವಿದೆ. ಏನು ಗೊತ್ತೇ? ಫ್ಲಿಪ್‌ಕಾರ್ಟ್‌ನ ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್, ಮೈಂತ್ರಾದ ಮುಖೇಶ್ ಬನ್ಸಾಲ್, ಸ್ನ್ಯಾಪ್‌ಡೀಲ್‌ನ ರೋಹಿತ್ ಬನ್ಸಾಲ್ ಹಾಗೂ ಲೆನ್ಸ್‌ಕಾರ್ಟ್‌ನ ಪಿಯೂಶ್ ಬನ್ಸಾಲ್ ಹಾದಿಯನ್ನೇ ಹಿಡಿದ ಮತ್ತೊಬ್ಬ ಬನ್ಸಾಲ್ ಇದೀಗ ಸ್ಟಾರ್ಟ್ ಅಪ್ ಉದ್ಯಮವನ್ನು ಹತ್ಯೆ ಮಾಡಿದ್ದಾರೆ!
ದಿಲ್ಲಿ ಐಐಟಿ ಪದವೀಧರರಾದ ಜ್ಯೋತಿ ಬನ್ಸಾಲ್ ಎಂಟು ವರ್ಷಗಳ ಹಿಂದೆ ಆರಂಭಿಸಿದ್ದ ಕಂಪೆನಿಯನ್ನು ಅಮೆರಿಕದ ಕಂಪೆನಿಯೊಂದಕ್ಕೆ ಮಾರಾಟ ಮಾಡಿದ್ದಾರೆ. 'ಆ್ಯಪ್ ಡೈನಾಮಿಕ್ಸ್' ಎಂಬ ಇವರ ಕಂಪೆನಿಯನ್ನು ಸಿಸ್ಕೊ 370 ಕೋಟಿ ಡಾಲರ್‌ಗೆ ಖರೀದಿಸಿದೆ. ಬನ್ಸಾಲ್ ಕಂಪೆನಿಯಲ್ಲಿ ಶೇಕಡ 14 ಪಾಲು ಹೊಂದಿದ್ದಾರೆ. ಇತರ ಹಲವು ವಹಿವಾಟುಗಳಿಗೆ ವೆಂಚರ್ ಬಂಡವಾಳವನ್ನು ಹೂಡಿದ ಬಳಿಕ ಶೇಕಡ 14ರಷ್ಟು ಪಾಲು ಮಾತ್ರ ಉಳಿದುಕೊಂಡಿತ್ತು. ಈ ಡೀಲ್‌ನಿಂದ ಬನ್ಸಾಲ್ 520 ದಶಲಕ್ಷ ಡಾಲರ್ (ಸುಮಾರು 3,400 ಕೋಟಿ ರೂಪಾಯಿ) ಪಡೆಯಲಿದ್ದಾರೆ.
ಆ್ಯಪ್ ಡೈನಾಮಿಕ್ಸ್ ತನ್ನ ಹೊಸ ಐಪಿಓ ಆರಂಭಿಸುವ ಒಂದು ದಿನ ಮೊದಲು ಈ ವಿಷಯ ಬಹಿರಂಗವಾಗಿದೆ. ಇದು ಕಂಪೆನಿಯ ಮೌಲ್ಯವನ್ನು 200 ಕೋಟಿ ಡಾಲರ್ ಎಂದು ಅಂದಾಜು ಮಾಡಿದೆ. ಆ್ಯಪ್ ಡೈನಾಮಿಕ್ಸ್‌ನ ಕೊನೆಯ ಹಂತದ ಫಂಡಿಂಗ್ 1.9 ಶತಕೋಟಿ ಡಾಲರ್ ಎಂದು ಅಂದಾಜು ಮಾಡಲಾಗಿದ್ದು, ಇದರ ಎರಡು ಪಟ್ಟು ಹಣವನ್ನು ನೀಡಲು ಸಿಸ್ಕೊ ಮುಂದಾಗಿದೆ.