ಕುಂಪನಮಜಲು: ದಾರುಸ್ಸಲಾಮ್ ಮದ್ರಸದಲ್ಲಿ ಗಣರಾಜ್ಯೋತ್ಸವ ಆಚರಣೆ
Update: 2017-01-26 09:36 IST
ಫರಂಗಿಪೇಟೆ ಜ.26: ಇಲ್ಲಿನ ಕುಂಪನಮಜಲು ದಾರುಸ್ಸಲಾಂ ಮದ್ರಸದ ಆಡಳಿತ ಸಮಿತಿಯ ವತಿಯಿಂದ 68ನೆ ಗಣರಾಜ್ಯೋತ್ಸವವನ್ನು ಇಂದು ಬೆಳಗ್ಗೆ ಮದ್ರಸ ವಠಾರದಲ್ಲಿ ಆಚರಿಸಲಾಯಿತು.
ಮದ್ರಸದ ಪ್ರಧಾನ ಕಾರ್ಯದರ್ಶಿ ಶರೀಫ್ ಕೆ. ಧ್ವಜಾರೋಹಣಗೈದರು. ದಾರುಸ್ಸಲಾಂ ಮದ್ರಸದ ಮುಅಲ್ಲಿಂ ಉಸ್ತಾದ್‌ಗಳಾದ ಎಂ.ಎಸ್.ಅಬೂ ಹುದೈಫ ಇಬ್ರಾಹೀಂ ಮುಸ್ಲಿಯಾರ್ ಮತ್ತು ಮುನೀರ್ ಝೈನಿ, ಮದ್ರಸದ ಸದಸ್ಯರಾದ ಇಸ್ಹಾಕ್, ಶರೀಫ್ ಡಿ. ಮತ್ತು ಮದ್ರಸದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಳಿಕ ನೆರೆದವರಿಗೆ ಸಿಹಿ ತಿಂಡಿ ವಿತರಿಸಲಾಯಿತು