ರಾಜ್ ಪಥ್ ನಲ್ಲಿ ಆಕರ್ಷಕ ಪಥ ಸಂಚಲನ; ಸೇನಾಶಕ್ತಿ ಅನಾವರಣ
Update: 2017-01-26 10:53 IST
ಹೊಸದಿಲ್ಲಿ, ಜ.26: ಹೊಸದಿಲ್ಲಿಯ ರಾಜ್ ಪಥ್ ನಲ್ಲಿ 68ನೆ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಆಕರ್ಷಕ ಪಥ ಸಂಚಲನದಲ್ಲಿ ಭಾರತೀಯ ಸೇನಾ ಶಕ್ತಿಯ ಅನಾವರಣಗೊಂಡಿತು. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಗೌರವ ರಕ್ಷೆ ಸ್ವೀಕರಿಸಿದರು.ಅಭುದಾಬಿಯ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಹೇದ್ ಅಲ್ ನಯ್ಯಾನ್ ಮುಖ್ಯ ಅತಿಥಿಯಾಗಿ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.