ಮಂಗಳೂರು: ಜ.27ರಂದು ಆದರ್ಶ ಘೋಷಣಾ ಸಮ್ಮೇಳನ
Update: 2017-01-26 11:02 IST
ಮಂಗಳೂರು, ಜ.26: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ವತಿಯಿಂದ ಆದರ್ಶ ಘೋಷಣಾ ಸಮ್ಮೇಳನವು ಜ.27ರಂದು ಸಂಜೆ 4:30ರಿಂದ ರಾತ್ರಿ 10ರವರೆಗೆ ನಗರದ ನೆಹರೂ ಮೈದಾನದಲ್ಲಿ ಜರಗಲಿದೆ.
ಸಮ್ಮೇಳನದಲ್ಲಿ ಕೇರಳದ ಜಮೀಯತೆ ಉಲಮಾದ ಕಾರ್ಯಾಧ್ಯಕ್ಷ ಮೌಲವಿ ಸಿ.ಪಿ.ಉಮರ್, ಮೌಲವಿ ಅಹ್ಮದ್ ಅನಸ್, ಬೆಂಗಳೂರಿನ ಡಯಟ್ಸ್ ಸಂಸ್ಥೆಯ ಅಧ್ಯಕ್ಷ ಉಮರ್ ಶರೀಫ್, ಮೌಲಾನ ಅಬ್ದುರ್ರಝಾಕ್ ಇ. ಮತ್ತು ಮೌಲವಿ ಅಲಿ ಉಮರ್ ಉಪನ್ಯಾಸ ನೀಡಲಿದ್ದಾರೆ. ಎಸ್ಕೆಎಸ್‌ಎಂ ಕೇಂದ್ರ ಸಮಿತಿಯ ಅಧ್ಯಕ್ಷ ಯು.ಎನ್.ಅಬ್ದುರ್ರಝಾಕ್ ಸಮ್ಮೇಳನದ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.