×
Ad

ಪಾಕಿಸ್ತಾನದ ಸಂಸತ್ತಿನಲ್ಲಿ ಮಹಿಳಾ ಸಂಸದೆಯನ್ನು ಅಪಮಾನಿಸಿದ ಸಚಿವ

Update: 2017-01-26 13:14 IST

ಕರಾಚಿ, ಜ. 26: ಪಾಕಿಸ್ತಾನದಲ್ಲಿ ಮಹಿಳಾ ಸಂಸದೆಯನ್ನು ಪುರುಷ ಸಂಸದ ಸಂಸತ್ತಿನಲ್ಲೇ ಅವಾಚ್ಯ ಮಾತುಗಳಿಂದ ಅಪಮಾನಿಸಿದ ಘಟನೆ ನಡೆದಿದೆ. ಮಹಿಳಾ ಸುರಕ್ಷತೆಯ ಕಾನೂನು ಜಾರಿಗೆ ತರುವ ಪ್ರಚಾರ ನಡೆಸಿದ್ದಕ್ಕಾಗಿ ಸಿಂಧ್ ಪ್ರಾಂತದ ಸಂಸದೆ ನುಸ್ರತ್ ಸಹರ್ ಅಬ್ಬಾಸ್‌ರನ್ನು ಅದೇ ಪ್ರಾಂತದ ಸಚಿವ ಇಮ್ದಾದ್ ಅಲಿ ಪಿತಾಫಿ ಸಂಸತ್ತಿನ ಅವರ ಚೇಂಬರ್‌ಗೆ ಕರೆಯಿಸಿ ಅವಾಚ್ಯ ಪದಗಳಿಂದ ಮಾತಾಡಿ ಅಪಮಾನಿಸಿದ್ದಾರೆ.

ಸಚಿವರು ಸಂಸದೆಯ ವಿರುದ್ಧ ಕೋಪದಿಂದ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಮಹಿಳಾ ಉಪಸಭಾಪತಿಯು ಇದನ್ನೆಲ್ಲ ನೋಡಿದ್ದರೂ ಸಚಿವರ ವಿರುದ್ಧ ಯಾವಕ್ರಮವನ್ನೂ ಕೈಗೊಂಡಿಲ್ಲ ಎಂದು ನುಸ್ರತ್ ಸಹರ್ ಅಬ್ಬಾಸ್ ಹೇಳಿದ್ದಾರೆ. ಘಟನೆಯ ಕುರಿತು ಕ್ರಮಕೈಗೊಳ್ಳದಿದ್ದರೆ ಆತ್ಮಹತ್ಯೆ ಮಾಡುತ್ತೇನೆ ಎಂದು ಸಹರ್ ಅಬ್ಬಾಸ್ ಸೋಶಿಯಲ್ ಮೀಡಿಯದಲ್ಲಿ ಪೆಟ್ರೋಲ್ ಬಾಟ್ಲಿ ಹಿಡಿದ ಫೋಟೊ ಹಾಕಿ ಬೆದರಿಕೆಯೊಡ್ಡಿದ್ದಾರೆ. ಫೋಟೊ ಸೋಶಿಯಲ್ ಮಿಡಿಯದಲ್ಲ ವೈರಲ್ ಆಗುವುದರೊಂದಿಗೆ ಆಡಳಿತಪಕ್ಷದ ನಾಯಕರು ಮಧ್ಯಪ್ರವೇಶಿಸಿ ಸಚಿವ ಸಂಸತ್ತಿನಲ್ಲಿ ಕ್ಷಮೆ ಕೋರುವಂತೆ ಮಾಡಿದರು. ಇದರೊಂದಿಗೆ ಘಟನೆ ಮುಗಿಯಿತು ಎಂದು ಸಹರ್ ಅಬ್ಬಾಸ್ ಹೇಳಿದ್ದಾರೆ.

ಮಹಿಳಾ ಸುರಕ್ಷತೆ ಕಾನೂನು ಜಾರಿಗೆ ಆಗ್ರಹಿಸುವಾಗ ಅಶ್ಲೀಲವಾಗಿಬೈದುದರಲ್ಲಿ ನಿಗೂಢತೆಯಿದೆ ಎಂದು ಅವರು ಆರೋಪಿಸಿದ್ದಾರೆ. ಪಾಕ್ ಸಂಸತ್ತಿನಲ್ಲಿ ಮಹಿಳೆ ಸುರಕ್ಷಿತಳಲ್ಲ ಎಂಬುದನ್ನು ಈ ಘಟನೆ ತೋರಿಸುತ್ತಿದೆ. ಮಹಿಳೆಯರ ವಿರುದ್ಧ ಆಸಿಡ್ ದಾಳಿ, ಕೊಲೆಪ್ರಕರಣಗಳು ಪಾಕಿಸ್ತಾನದಲ್ಲಿ ಸಾಮಾನ್ಯವಾಗಿದೆ. ಇತ್ತೀಚೆಗೆ ಮಹಿಳಾ ಸಂರಕ್ಷಣೆಯ ಹಲವಾರು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದರೆ ಅಲ್ಲಿನ ಅಧಿಕಾರಿಗಳು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News