ಜ. 27ರಂದು ಕೊಳಕೆಯಲ್ಲಿ ತಾಜುಲ್ ಉಲಮಾ ಆಂಡ್ ನೇರ್ಚೆ
ಬಂಟ್ವಾಳ, ಜ. 26: ಮುಹಿಯುದ್ದೀನ್ ಜುಮಾ ಮಸೀದಿ, ಸುನ್ನಿ ಬಾಲ ಸಂಘ ಇದರ ಜಂಟಿ ಆಶ್ರಯದಲ್ಲಿ ತಾಜುಲ್ ಉಲಮಾ ಮೂರನೆ ಆಂಡ್ ನೇರ್ಚೆ ಮತ್ತು ನೂರೇ ಮದೀನಾ ಬುರ್ದಾ ಮಜ್ಲಿಸ್ ಕಾರ್ಯಕ್ರಮ ಜನವರಿ 27ರಂದು ರಾತ್ರಿ 7 ಗಂಟೆಗೆ ಕೊಳಕೆ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಜರಗಲಿದೆ.
ಸಯ್ಯದ್ ಹಾಮಿದ್ ಇಂಚ್ಚಿಕೋಯ ತಂಙಳ್ ಅಲ್ ಬುಖಾರಿ ಎಟ್ಟಿಕುಳಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಸಯ್ಯದ್ ಮುಶ್ತಾಖುರ್ರಹ್ಮಾನ್ ತಂಙಳ್ ಚಟ್ಟೆಕಲ್ ಉದ್ಘಾಟಿಸಲಿದ್ದಾರೆ.
ಬದ್ರುದ್ದೀನ್ ಅಹ್ಸನಿ ಅಳಕೆ ಮುಖ್ಯ ಪ್ರಭಾಷಣಗೈಯಲಿದ್ದು ಸಯ್ಯದ್ ಖಾಸಿಂ ತಂಙಳ್ ಸಾಲೆತ್ತೂರು, ಸಯ್ಯದ್ ಅಮೀರ್ ತಂಙಳ್ ಅಮ್ಮೆಂಬಳ, ಸಯ್ಯದ್ ಬದ್ರುದ್ದೀನ್ ತಂಙಳ್ ತೀರ್ಥಹಳ್ಳಿ, ಎನ್.ಎ.ಅಬ್ದುರ್ರಹ್ಮಾನ್ ಮದನಿ ಕಾರಾಜೆ, ಹಸನ್ ಸಖಾಫಿ, ಸಿದೀಕ್ ಸಖಾಫಿ ಮುಳೂರು, ಮುಹಮ್ಮದ್ ಹಾಜಿ ಸಾಗರ ಸೇರಿದಂತೆ ಇನ್ನಿತರ ಉಲಮಾ, ಉಮರಾ ನೇತರಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿಯ ಸಂಚಾಲಕ ಕೆ.ಪಿ.ಅಬ್ದುಲ್ಲಾ ಕೊಳಕೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.