ಕಣಚೂರು ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ
Update: 2017-01-26 17:41 IST
ಕೊಣಾಜೆ , ಜ.26 : ಕಣಚೂರು ವಿದ್ಯಾಸಂಸ್ಥೆ0ುಲ್ಲಿ 68ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
ಕಣಚೂರು ಸಂಸ್ಥೆ0ು ಮುಖ್ಯಸ್ಥರಾದ ಯು.ಕೆ. ಮೋನು ಧ್ವಜಾರೋಹಣವನ್ನು ನೆರವೇರಿಸಿದರು.
ಕಣಚೂರು ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿರುಪಾಕ್ಷ, ಉಪಮುಖ್ಯಸ್ಥರಾದ ಡಾ. ದೇವಿಪ್ರಸಾದ್, ಮೆಡಿಕಲ್ ಕಾಲೇಜಿನ ಆಡಳಿತ ಅಧಿಕಾರಿ ಡಾ. ರೋಹನ್ ಮೊನಿಸ್, ಡಾ. ಶೀಷಾ ಕಂಡಿಗೆ, ಸಂಚಾಲಕರಾದ ಅಬ್ದುಲ್ ರಹಿಮಾನ್, ಪ್ರಾಂಶುಪಾಲರುಗಳಾದ ಯು. ಟಿ ಇಕ್ಬಾಲ್, ರಾಮಚಂದ್ರ ಭಟ್ , ಹೇಮಲತಾ , ಪೂರ್ವಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಲಿನೆಟ್ ಡಿಸೋಜ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಲೆಯ ಪ್ರಾಂಶುಪಾಲರಾದ ಆನಂದಿ ಕೆ. ಸ್ವಾಗತಿಸಿದರು. ಸುಸಾನ್ನ ಕಾರ್ಯಕ್ರಮವನ್ನು ನಿರೂಪಿಸಿದರು, ಮಹಮ್ಮದ್ ಸನಿಲ್ ವಂದಿಸಿದರು.