ಪಾಂಡವರಕಲ್ಲು ಜುಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಣೆ
Update: 2017-01-26 17:46 IST
ಬಂಟ್ವಾಳ, ಜ. 26: ಪಾಂಡವರಕಲ್ಲು ಬದ್ರಿಯಾ ಜುಮಾ ಮಸೀದಿ ಹಾಗೂ ನೂರುಲ್ ಹುದಾ ಮದರಸದ ಜಂಟಿ ಆಶ್ರಯದಲ್ಲಿ ಗುರುವಾರ ಬೆಳಗ್ಗೆ ಮದರಸಾ ಸಭಾಂಗಣದಲ್ಲಿ 68ನೆ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮಸೀದಿಯ ಅಧ್ಯಕ್ಷ ಕೆ.ಜಿ.ಎನ್.ಪುತ್ತುಮೋನು ಧ್ವಜಾರೋಹಣಗೈದು ಮಾತನಾಡಿದರು.
ಖತೀಬ್ ಅಬ್ದುಲ್ ಖಾದರ್ ದಾರಿಮಿ ದುಅ ಆರ್ಶೀರ್ವಚನಗೈದರು. ಪ್ರಧಾನ ಕಾರ್ಯದರ್ಶಿ ಕೆ.ಪಿ.ಉಮರ್ ಮುಸ್ಲಿಯಾರ್ ಮತ್ತು ಸದರ್ ಮುಅಲ್ಲಿಮ್ ಜಿ.ವೈ.ಅಬ್ದುಲ್ ರಝಾಕ್ ಮೌಲವಿ ಗೇರುಕಟ್ಟೆ ಮುಖ್ಯ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಬದ್ರು ಮೌಲವಿ, ಮುಹಮ್ಮದ್ ಮೌಲವಿ ನಾಳೆ, ಲತೀಫ್, ಫಾರೂಕ್, ಅಬ್ದುಲ್ ಖಾದರ್ ಸಹಿತ ಮದರಸ ವಿದ್ಯಾರ್ಥಿಗಳು ಸ್ಥಳೀಯರು ಉಪಸ್ಥಿತರಿದ್ದರು.
ಮದರಸಾ ವಿದ್ಯಾರ್ಥಿ ಹಫೀಝ್ ಪ್ರತಿಜ್ಞೆ ಬೋಧಿಸಿದರು.