ಜೈನ್‌ಪೇಟೆ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕಾಗಿ ಅಧಿಕಾರಿಗಳಿಂದ ಪರಿಶೀಲನೆ
ಮೂಡುಬಿದಿರೆ , ಜ.26 :ಇಲ್ಲಿನ ಜೈನ್ ಪೇಟೆಯ ಇಕ್ಕಟ್ಟಾದ ರಸ್ತೆಯಲ್ಲಿ ಆಗಾಗ್ಗೆ ಟ್ರಾಫಿಕ್ ಜಾಮ್ ಆಗುತ್ತಿದ್ದು , ಇದರಿಂದ ವಾಹನ ಸಂಚಾರಕ್ಕೆ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಪುರಸಭೆ ಮತ್ತು ಪೊಲೀಸ್ ಇಲಾಖೆಗೆ ದೂರುಗಳು ಕೇಳಿಬಂದಿದ್ದವು.
ಜೈನ್ ಪೇಟೆಯಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು ಪುರಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಬುಧವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು .
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಸದಸ್ಯ ಬಾಹುಬಲಿ ಪ್ರಸಾದ್, ಎಂಜಿನಿಯರ್ ದಿನೇಶ್, ಎಸ್.ಐ ದೇಜಪ್ಪ ಬುಧವಾರ ಸಂಜೆ ಸ್ಥಳ ಪರಿಶೀಲನೆ ನಡೆಸಿದರು.
ಕಾರ್ಕಳ, ಬೆಳ್ಮಣ್ ಮತ್ತು ಶಿರ್ತಾಡಿ ಕಡೆಯಿಂದ ಮೂಡುಬಿದಿರೆಗೆ ಬರುವ ಬಸ್‌ಗಳು ಜೈನ್ ಹೈಸ್ಕೂಲ್ ಎದುರಿನ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಲು ಮತ್ತು ಹತ್ತಿಸಲು ಅನುಕೂಲವಾಗುವಂತೆ ರಸ್ತೆಯ ಎಡಬದಿಯಲ್ಲಿ ಉದ್ದಕ್ಕೆ ಪೈಂಟ್ ಎಳೆಯಲು ಅಧಿಕಾರಿಗಳು ನಿರ್ಧರಿಸಿದರು.
ಕಾರ್ಕಳ ಕಡೆ ಹೋಗುವ ಎಲ್ಲ ಬಸ್‌ಗಳು ಜೈನ್ ಹೈಸ್ಕೂಲ್ ಎದುರಿನ ನಿಲುಗಡೆ ಬದಲು ಈ ಹೈಸ್ಕೂಲ್‌ನ ಇನ್ನೊಂದು ಬದಿಯಿರುವ ಹಳೆ ಧರ್ಮ ಛತ್ರದ ಬಳಿ ಪುರಸಭೆ ಈ ಹಿಂದೆ ನಿರ್ಮಿಸಿದ ಬಸ್‌ನಿಲ್ದಾಣದ ಎದುರು ನಿಲುಗಡೆ ಮಾಡಲು ಈಗಾಗಲೇ ತೆಗೆದುಕೊಂಡ ನಿರ್ಧಾರದ ಅನುಷ್ಠಾಕ್ಕೆ ಚಿಂತನೆ ನಡೆಸಲಾಯಿತು.