ಕಪ್ಪು ಹಣದ ವಿರುದ್ಧ ಯುದ್ಧ ಮಾತಿನಲ್ಲಿ , ಶರದ್ ಪವಾರ್ ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ !

Update: 2017-01-26 12:54 GMT

ಹೊಸದಿಲ್ಲಿ , ಜ. 26 : ಈ ಬಾರಿಯ ಪದ್ಮ ಪ್ರಶಸ್ತಿಗೆ ಒಟ್ಟು ೧೨೦ ಸಾಧಕರು ಆಯ್ಕೆಯಾಗಿದ್ದಾರೆ. ಈ ಪೈಕಿ ಏಳು ಮಂದಿಯನ್ನು ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಏಳು ಮಂದಿಯಲ್ಲಿ ನಾಲ್ವರು ರಾಜಕಾರಣಿಗಳಾಗಿರುವುದು ವಿಶೇಷ. ಆದರೆ ಈ ಬಾರಿಯ ಪಟ್ಟಿಯಲ್ಲಿ ಅಚ್ಚರಿ ಮೂಡಿಸಿದ ಹೆಸರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ , ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರದ್ದು ! 

ಮರಾಠ ಘಟಾನುಘಟಿ ಪವಾರ್ ಇದೇ ವರ್ಷ ರಾಜಕೀಯದಲ್ಲಿ ೫೦ ವರ್ಷ ಪೂರೈಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಒಲಿದಿದೆ. ಆದರೆ ಸಕ್ರಿಯ ರಾಜಕಾರಣ ಮಾಡಿದ, ಭ್ರಷ್ಟಾಚಾರ ಹಾಗು ಕಪ್ಪು ಹಣ ಇರುವ ಆರೋಪ ಎದುರಿಸುತ್ತಿರುವ, ಕುಟುಂಬ ರಾಜಕಾರಣ ಮಾಡುವ ಪವಾರ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಜನರ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು ಹಲವಾರು ವ್ಯಂಗ್ಯವಾಡಿದ್ದಾರೆ.

ಅಂತಹ ಕೆಲವು ಸ್ಯಾಂಪಲ್ ಗಳು ಇಲ್ಲಿವೆ :

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News