ಮೂಡುಬಿದಿರೆ ಪುರಸಭೆಯಲ್ಲಿ ಗಣರಾಜ್ಯೋತ್ಸವ ಆಚರಣೆ
ಮೂಡುಬಿದಿರೆ , ಜ.26 : ದೇಶವನ್ನು ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಿಗೊಳಿಸಿದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ತಮ್ಮ ಸುಖವನ್ನು ತ್ಯಜಿಸಿ ದೇಶ ರಕ್ಷಣೆಗಾಗಿ ಗಡಿಯಲ್ಲಿ ನಿಂತಿರುವ ಸೈನಿಕರು ದೇಶದ ಇಂದಿನ ಸುಂದರ ದಿನಗಳಿಗೆ ಕಾರಣೀಕರ್ತರು. ಅವರು ನಮ್ಮ ನೆನಪಿನಲ್ಲಿ ಸದಾ ಇರಬೇಕಾದವರು ಎಂದು ಮೂಡುಬಿದಿರೆ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ ಅವರು ಹೇಳಿದರು.
ಇಲ್ಲಿನ ಪುರಸಭೆಯಲ್ಲಿ ಇಂದು ಬೆಳಿಗ್ಗೆ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್ ಮಾತನಾಡಿ ವಿಶ್ವದಲ್ಲೇ ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ. ಇದು ಭಾರತೀಯರಾದ ನಾವು ಹೆಮ್ಮೆ ಪಡಬೇಕಾದ ವಿಷಯ ಎಂದು ಹೇಳಿದರು.
ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಪಿ.ಕೆ.ಥೋಮಸ್, ನಾಮನಿರ್ದೇಶಿತ ಸದಸ್ಯ ಆಲ್ವೀನ್ ಮಿನೇಜಸ್, ಪರಿಸರ ಅಭಯಂತರೆ ಶಿಲ್ಪಾ, ಸಿಬಂದಿಗಳಾದ ಸುಧೀಶ್ ಹೆಗ್ಡೆ, ಯಶಸ್ವಿನಿ, ಮೂಡುಬಿದಿರೆ ಥರ್ಡ್ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ಉಪಸ್ಥಿತರಿದ್ದರು.