ಇಖ್ರಾ ಅರೆಬಿಕ್ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ
ಮಂಗಳೂರು , ಜ.26 : ವೈವಿಧ್ಯತೆಯನ್ನು ಗೌರವಿಸಿರಿ , ಭಾರತೀಯ ಸಂಸ್ಕೃತಿ ಮತ್ತು ಕಲೆಯನ್ನು ಪ್ರೋತ್ಸಾಹಿಸಿರಿ . ರಾಷ್ಟ್ರವನ್ನು ಕಟ್ಟೋಣ ಎಂಬುವುದು ಕೇವಲ ಘೋಷಣೆಯಾಗದೆ , ರಚನಾತ್ಮಕವಾಗಿ ರಾಷ್ಟ್ರ ಕಟ್ಟುವ ನಿರ್ಣಯವನ್ನು ಕೈಗೊಳ್ಳಬೇಕಾಗಿದೆ ಎಂದು ಕಾರ್ ಸ್ಟ್ರೀಟ್ ಸರಕಾರಿ ಪದವಿಪೂರ್ವ ಕಾಲೇಜು ಕನ್ನಡ ಪ್ರಾಧ್ಯಾಪಕ ವಾಸುದೇವ ಬೆಳ್ಳೆ ಹೇಳಿದರು.
ಅವರು ಇಖ್ರಾ ಅರೆಬಿಕ್ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಇನ್ನೋರ್ವ ಅತಿಥಿ ಹಿದಾಯ ಫೌಂಡೇಶನ್ ಹೆಚ್.ಕೆ.ಖಾಸಿಮ್ ಮಾತನಾಡಿ , ನಮ್ಮ ದೇಶದ ಸಂವಿಧಾನ ಮತ್ತು ಧಾರ್ಮಿಕ ಸಂವಿಧಾನವನ್ನು ಸರಿಯಾಗಿ ಅನುಸುವುದರ ಮೂಲಕ ವಿಜಯಗಳಿಸಬಹುದು ಎಂದು ಹೇಳಿದರು .
ಶಾಲೆಯ ಪ್ರಾಂಶುಪಾಲರಾದ ಮೌಲಾನಾ ಸಾಲಿಮ್ ನದ್ವಿ , ಅಧ್ಯಾಪಕ ನಝೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು .
ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳಿಂದ ಗಣರಾಜ್ಯೋತ್ಸವದ ಬಗ್ಗೆ ಭಾಷಣ ನಡೆಯಿತು.
ಮನಸೂರೆಗೊಂಡ ಆಕರ್ಷಕ ಪಥ ಸಂಚಲನ
ಧ್ವಜಾರೋಹಣದ ನಂತರ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು . ವಿದ್ಯಾರ್ಥಿಗಳ ಶಿಸ್ತಿನ ನಡೆಯು ದೇಶಕಾಯುವ ಸೈನಿಕರನ್ನು ನೆನಪಿಸುವುದರ ಮೂಲಕ ನೆರೆದಿರುವವರ ಮನಸೂರೆಗೊಂಡಿತು .