ಅರಳ : ಜ. 27 ರಿಂದ ಮುನೀರುಲ್ ಇಸ್ಲಾಂ ವಾರ್ಷಿಕೋತ್ಸವ
ವಿಟ್ಲ , ಜ.26 : ಬಂಟ್ವಾಳ ತಾಲೂಕಿನ ಅರಳ ಮುಹಿಯುದ್ದೀನ್ ಜುಮಾ ಮಸೀದಿ ಅಧೀನದ ಮುನೀರುಲ್ ಇಸ್ಲಾಂ ಯಂಗ್‌ಮೆನ್ಸ್ ಎಸೋಸಿಯೇಶನ್ ಅರಳ ಇದರ 25ನೇ ವಾರ್ಷಿಕೋತ್ಸವದ ಪ್ರಯುಕ್ತ ಇಸ್ಲಾಮಿಕ್ ಕಥಾ ಪ್ರಸಂಗ, ಸ್ವಲಾತ್ ವಾರ್ಷಿಕ ಹಾಗೂ ಸಂಶುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ ಜನವರಿ 27 ರಿಂದ 29ರವರೆಗೆ ಇಲ್ಲಿನ ಮಸೀದಿ ವಠಾರದ ಮರ್‌ಹೂಂ ಸಿ. ಕುಂಞಿಪಕ್ಕಿ ವೇದಿಕೆಯಲ್ಲಿ ನಡೆಯಲಿದೆ.
ಜನ 27 ಮತ್ತು 28 ರಂದು ಎಂ.ಎಚ್.ಆರ್. ಹಂಝ ಮುಸ್ಲಿಯಾರ್ ಅವರಿಂದ ಕಥಾ ಪ್ರಸಂಗ ಹಾಗೂ 29 ರಂದು ಸಂಶುಲ್ ಉಲಮಾ ಅನುಸ್ಮರಣೆ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರಮ ನಡೆಯಲಿದ್ದು, ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಉಪಾಧ್ಯಕ್ಷ ಶೈಖುನಾ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು, ಸಯ್ಯಿದ್ ಮುಹಮ್ಮದ್ ಕೋಯ ತಂಙಳ್ ಇಬ್ನು ಯಾಸೀನ್ ಮುತ್ತುಕೋಯ ತಂಙಳ್ ರಾಮಂದಳಿ, ರಿಯಾರ್ ರಹ್ಮಾನಿ ಕಿನ್ಯ, ಉಬೈದುಲ್ಲಾ ಅರ್ಹರಿ ದೆಮ್ಮಲೆ, ಶರೀಫ್ ಅರ್ಶದಿ ಸವಣೂರು, ಅಯ್ಯೂಬ್ ಮುಸ್ಲಿಯಾರ್ ಅರಳ, ಶಮೀರ್ ಅರ್ಶದಿ ಅರಳ ಮೊದಲಾದವರು ಭಾಗವಹಿಸಲಿದ್ದಾರೆ. ಸ್ಥಳೀಯ ಮಸೀದಿ ಅಧ್ಯಕ್ಷ ಕೆ.ಎಚ್. ಖಾದರ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.