×
Ad

ಕಡಬ : ಗಣರಾಜ್ಯೋತ್ಸವ ದಿನಾಚರಣೆ

Update: 2017-01-26 21:14 IST

ಕಡಬ,ಜ.26: ದೇ ಶ ಪ್ರಗತಿಯತ್ತ ಸಾಗುತ್ತಿದ್ದು ಆರ್ಥಿಕವಾಗಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದ್ದರು ಆಂತರಿಕ ಸಮಸ್ಯೆಗಳಿಂದ ಮುಕ್ತಿ ಹೊಂದಲು ಸಾಧ್ಯವಾಗಿಲ್ಲ ಎಂದು ಕಡಬ ವಿಶೇಷ ತಹಶೀಲ್ದಾರ ಬಿ ಲಿಂಗಯ್ಯ ಹೇಳಿದರು.

  ಕಡಬ ಮಾ.ಹಿ.ಪ್ರಾ.ಶಾಲೆಯಲ್ಲಿ ಕಂದಾಯ ಇಲಾಖಾ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ ಆಯೋಜಿಸಿದ್ದ 68ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಿದ್ದರು .

  ಬಾಹ್ಯ ಸಮಸ್ಯೆಗಳಿಗೆ ನಮ್ಮ ದೇಶದ ವೀರ ಯೋಧರು ದಿಟ್ಟ ನಿಲುವಿನೊಂದಿಗೆ ಗಡಿ ಪ್ರದೇಶದಲ್ಲಿ ಕಾಯುತ್ತಿದ್ದು ಭಾರತವನ್ನು ಕಾಪಾಡಲು ಕಟಿಬದ್ದರಾಗಿದ್ದರೂ ದೇಶದೊಳಗಿನ ಸಮಸ್ಯೆ ನಿವಾರಿಸಲು ಕಟಿಬದ್ದರಾಗಬೇಕು. ದೇಶದಲ್ಲಿ ಅನಾಚಾರಗಳು ಒಳಜಗಳಗಳೂ ಹೆಚ್ಚಾಗಿದ್ದು ರಾಷ್ಟ್ರ ನಾಯಕರೂ ದೇಶವನ್ನು ಒಗ್ಗೂಡಿಸಿ ಅಖಂಡ ಭಾರತವನ್ನು ನಿರ್ಮಾಣ ಮಾಡಿದ್ದು ಇಂದು ದೇಶಾಧ್ಯಂತ ಣರಾಜ್ಯೋತ್ಸವ ಆಚರಿಸುತ್ತಿದ್ದೇವೆ ಎಂದರು.

  ಶ್ರೀರಾಮಕುಂಜೇಶ್ವರ ಪದವಿ ಪೂರ್ವಕಾಲೇಜಿನ ಉಪನ್ಯಾಸಕ ಗಣರಾಜ್ ಕುಂಬ್ಳೆ ಮಾತನಾಡಿ  , ಹೆಚ್ಚು ಜನರ ಒಲವಿರುವ ಸಾರ್ವಜನಿಕರ ವಿಚಾರಗಳನ್ನು ಮುಂದಿಟ್ಟುಕೊಂಡು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಜನರೊಂದಿಗೆ ನಿರಂತರ ಬೆರೆಯುವಲ್ಲಿ ಜನಪ್ರತಿನಿಧಿಗಳು ಶ್ರಮಿಸಬೇಕಲ್ಲದೆ ತಾರತಮ್ಯವಿಲ್ಲದೆ ಇಚ್ಚಾಶಕ್ತಿಯಿಂದ ಕೆಲಸ ನಿರ್ವಹಿಸುವುದರ ಮೂಲಕ ಸಮಾಜದ ಅಭಿವೃದ್ದಿಯತ್ತ ಮುನ್ನಡೆಯಬೇಕಾಗಿದೆ. ಮಕ್ಕಳಿಂದ ಹಿರಿಯವರೆಗೆ ಎಲ್ಲರಿಗೂ ಶಿಕ್ಷಣ ನೀಡುವುದರೊಂದಿಗೆ ಸಮಾಜದಲ್ಲಿ ಅರಿವಿನ ಮೂಲಕ ಕಾರ್ಯಪ್ರವೃತ್ತರಾಗಬೇಕಾಗಿದೆ. ಪ್ರತಿಯೊಬ್ಬರು ತಮ್ಮ ಮೌಲ್ಯವನ್ನು  ಅರಿತು ಮುನ್ನಡೆಯಬೇಕಾಗಿದೆ ಎಂದರು .

  ಕಡಬ ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ ಅಧ್ಯಕ್ಷತೆ ವಹಿಸಿದ್ದರು.

ಕಡಬ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್  , ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ, ಕಡಬ ಸಂಪನ್ಮೂಲ ವ್ಯಕ್ತಿ ಕುಮಾರ್ ಕೆ.ಜೆ, ಕಡಬ ಕದಂಬ ಜೇಸಿಐ ಅಧ್ಯಕ್ಷ ತಸ್ಲೀಮ್ ಶುಭಹಾರೈಸಿದರು.

ಈ ಸಂದರ್ಭ  ಅಮೆರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಡಾ ರೋಹಿಲಾ ರೋಡ್ರಿಗಸ್ ಸನ್ಮಾನಿಸಲಾಯಿತು.

 ಕಡಬ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯ ವಠಾರದಿಂದ ಪ್ರಾರಂಭಗೊಂಡ ಗಣರಾಜ್ಯೋತ್ಸವ ಜಾಥಾವು ಕಡಬ ಪೇಟೆಯಾದ್ಯಂತ ಸಾಗಿ ಬಳಿಕ ಕಡಬ ಮಾದರಿ ಶಾಲೆಯಲ್ಲಿ ಸಮಾಪನಗೊಂಡಿತ್ತು.

ಕಡಬ ಪೊಲೀಸ್ ಠಾಣಾ ಎಎಸ್‌ಐ ರವಿ ಹಾಗೂ ಸಿಬ್ಬಂದಿವರ್ಗದವರು ಪಥಸಂಚಲನ ನಡೆಸಿ ಧ್ವಜವಂದನೆ ನಡೆಸಿದರು.

ಕಡಬ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿನಿಯರು ರಾಷ್ಟ್ರಗೀತೆ ಹಾಡಿದರು.

ಕಡಬ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ಸ್ವಾಗತಿಸಿದರು. ಕ

ಡಬ ಗ್ರಾ.ಪಂ.ಸಿಬ್ಬಂದಿ ಹರೀಶ್ ಬೆದ್ರಾಜೆ ವಂದಿಸಿದರು. ಭೂಮಾಪಕ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News