×
Ad

ಜಗತ್ತಿನ ಎಂಟು ಬೃಹತ್ ಶಕ್ತಿಗಳಲ್ಲಿ ಭಾರತಕ್ಕೆ 6 ನೇ ಸ್ಥಾನ, ಮೋದಿಗೆ ಪ್ರಶಂಸೆ

Update: 2017-01-26 21:21 IST

ವಾಶಿಂಗ್ಟನ್, ಜ. 26: ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ತನ್ನ ಎದುರಾಳಿ ದೇಶಗಳನ್ನು ಹಿಂದಿಕ್ಕಿ ಮುಂದುವರಿಯುತ್ತಿದೆ ಎಂದು ಅಮೆರಿಕದ ವಿದೇಶ ನೀತಿ ಮ್ಯಾಗಝಿನ್ ‘ದ ಅಮೆರಿಕನ್ ಇಂಟರೆಸ್ಟ್’ ಹೇಳಿದೆ.

ಮ್ಯಾಗಝಿನ್ ಸಿದ್ಧಪಡಿಸಿದ 2017ರ ಎಂಟು ಜಾಗತಿಕ ಶಕ್ತಿಗಳ ಪಟ್ಟಿಯಲ್ಲಿ ಭಾರತ ಆರನೆ ಸ್ಥಾನದಲ್ಲಿದೆ.

ಪಟ್ಟಿಯ ಅಗ್ರ ಸ್ಥಾನದಲ್ಲಿ ಅಮೆರಿಕವಿದ್ದರೆ, ಚೀನಾ ಮತ್ತು ಜಪಾನ್‌ಗಳು ಜಂಟಿ ಎರಡನೆ ಸ್ಥಾನದಲ್ಲಿವೆ. ರಶ್ಯ ಮತ್ತು ಜರ್ಮನಿ ಕ್ರಮವಾಗಿ ನಾಲ್ಕು ಮತ್ತು ಐದನೆ ಸ್ಥಾನಗಳಲ್ಲಿವೆ.

ಇರಾನ್ ಏಳನೆ ಸ್ಥಾನವನ್ನು ಪಡೆದರೆ ಇಸ್ರೇಲ್ ಎಂಟನೆ ಸ್ಥಾನದಲ್ಲಿದೆ.

‘‘ಜಾಗತಿಕ ಶಕ್ತಿಗಳ ಪಟ್ಟಿಯಲ್ಲಿ ಜಪಾನ್‌ನಂತೆ ಭಾರತವನ್ನೂ ನಿರ್ಲಕ್ಷಿಸಲಾಗುತ್ತಿದೆ. ಆದರೆ, ಅದು ಜಾಗತಿಕ ರಂಗದಲ್ಲಿ ಅಪರೂಪದ ಹಾಗೂ ಅಸೂಯೆಪಡುವಂಥ ಸ್ಥಾನವನ್ನು ಆಕ್ರಮಿಸಿದೆ’’ ಎಂದು ಪತ್ರಿಕೆ ಎಂಟು ಜಾಗತಿಕ ಶಕ್ತ ದೇಶಗಳ ಕುರಿತ ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News