ಕಂಬಳಕ್ಕೆ ಜೆಡಿಎಸ್ ಬೆಂಬಲ
Update: 2017-01-26 22:29 IST
ಉಡುಪಿ, ಜ.26: ಕರಾವಳಿ ಕರ್ನಾಟಕದ ಜಾನಪದ ಕ್ರೀಡೆಯಾದ ಕಂಬಳವನ್ನು ಅನಾದಿ ಕಾಲದಿಂದಲೂ ಜಾತಿ, ಮತ ಭೇದವಿಲ್ಲದೆ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಕ್ರೀಡೆಯಲ್ಲಿ ಭಾಗವಹಿಸುವ ಕೋಣ ಗಳನ್ನು ಅತ್ಯಂತ ಕಾಳಜಿ, ಪ್ರೀತಿ, ವಾತ್ಸಲ್ಯ ಹಾಗೂ ಜಾಗರೂಕತನದಿಂದ ಸಾಕಲಾಗುತ್ತಿದೆ ಎಂದು ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗಿಶ್ ವಿ. ಶೆಟ್ಟಿ ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಧ್ಯಸ್ಥಿಕೆ ವಹಿಸಿ ಜಾನಪದ ಕ್ರೀಡೆಯಾದ ಕಂಬಳದ ಮೇಲಿನ ನಿಷೇಧವನ್ನು ತೆರವುಗೊಳಿಸಿ ಕಂಬಳ ಸಂಸ್ಕೃತಿ ಯನ್ನು ಉಳಿಸಲು ಮುಂದಾಗಬೇಕು ಎಂದವರು ಆಗ್ರಹಿಸಿದ್ದಾರೆ. ಕಂಬಳ ಸಮಿತಿಗೆ ಮತ್ತು ಕಂಬಳ ಪರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.