×
Ad

ಹಿರಿಯರ ಬಲಿದಾನದಿಂದ ಸ್ವಾಭಿಮಾನದ ಬದುಕು : ಅಭಯಚಂದ್ರ ಜೈನ್

Update: 2017-01-26 22:57 IST

ಮೂಡುಬಿದಿರೆ , ಜ.26 : ಸ್ವಾತಂತ್ರ್ಯ ಸೇನಾನಿಗಳ ಬಲಿದಾನವೇ ನಮ್ಮ ಇಂದಿನ ಸ್ವಾಭಿಮಾನದ ಬದುಕಿಗೆ ಕಾರಣ. ಸ್ವತಂತ್ರ ಭಾರತದ ಆರಂಭದಲ್ಲಿ ದೇಶ ಹಲವು ಸಮಸ್ಯೆಗಳನ್ನು ಎದುರಿಸುತ್ತಿತ್ತು. ಈ ಸಂದರ್ಭದಲ್ಲಿ ನೆಹರೂ ಅವರ ಅಪ್ರತಿಮ ದೂರದೃಷ್ಟಿಯ ಪರಿಣಾಮವಾಗಿ ಜಾರಿಗೆ ಬಂದ ಪಂಚವಾರ್ಷಿಕ ಯೋಜನೆಗಳಿಂದಾಗಿಯೇ ದೇಶ ಇಂದು ಬಲಿಷ್ಠವಾಗಿ ಬೆಳೆದು ನಿಲ್ಲಲು ಸಹಾಯವಾಗಿದೆ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.

ರೋಟರಿ ಕ್ಲಬ್ ಹಾಗೂ ಅರಣ್ಯ ಇಲಾಖೆಯ ವತಿಯಿಂದ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಗುರುವಾರ ನಡೆದ 68ನೇ ಗಣರಾಜ್ಯೋತ್ಸವದಲ್ಲಿ ಪಥಸಂಚಲನದ ಗೌರವ ರಕ್ಷೆ ಸ್ವೀಕರಿಸಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕಠಿಣ ಪರಿಶ್ರಮದಿಂದ ಯುವ ಸಮುದಾಯ ಇನ್ನಷ್ಟು ಬಲಿಷ್ಠವಾದ ದೇಶವನ್ನು ಕಟ್ಟಲು ತಯಾರಾಗಬೇಕು. ಶಿಕ್ಷಣ ಹಾಗೂ ಉದ್ಯೋಗ ಸೃಷ್ಟಿಗೆ ಪೂರಕವಾಗಿ ನಾವು ಯುವ ಸಮುದಾಯವನ್ನು ಬೆಳೆಸಬೇಕಿದೆ. ಪ್ರಾಮಾಣಿಕ ಪ್ರಯತ್ನಗಳಿಂದ ದೇಶದಲ್ಲಿ ಐಕ್ಯತೆ ಸಾಧಿಸುವುದು ಸಾಧ್ಯವಿದೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪುರಸಭೆ ಉಪಾಧ್ಯಕ್ಷ ವಿನೋದ್ ಸೆರಾವೋ, ತಹಸೀಲ್ದಾರ್ ಮಹಮ್ಮದ್ ಇಸಾಖ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹೆಚ್. ಆರ್ ಸುಬ್ರಹ್ಮಣ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ರಾಜಶ್ರೀ ಭಾಗವಹಿಸಿದರು. ನಿವೃತ್ತ ಅಧ್ಯಾಪಕ ಶಾಂತಿರಾಜ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೂಡುಬಿದಿರೆಯ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಹತ್ತಾರುತಂಡಗಳು ನೀಡಿ ಗೌರವಿಸಲಾಯಿತು.

ರೋಟರಿ ಕಾರ್ಯದರ್ಶಿ ಡಾ. ಸುದೀಶ್ ವಂದಿಸಿದರು. ಡಾ. ಪುಂಡಿಕಾ ಗಣಪಯ್ಯಭಟ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News