×
Ad

ಮಸಾಜ್ ಪಾರ್ಲರ್ ಗೆ ದಾಳಿ : ಮ್ಯಾನೇಜರ್ ಸಹಿತ ಮೂವರ ಬಂಧನ

Update: 2017-01-26 23:17 IST

ಮಂಗಳೂರು , ಜ.26 : ಮಸಾಜ್ ಪಾರ್ಲರ್ ಗೆ ನಡೆದ  ಪೊಲೀಸ್ ದಾಳಿಯೊಂದರಲ್ಲಿ ಅನೈತಿಕ ದಂಧೆಯಲ್ಲಿ ತೊಡಗಿದ್ದ ಮೂವರನ್ನು  ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಮಂಗಳೂರಿನ ಬಿಜೈ ನಲ್ಲಿರುವ ಮಸಾಜ್ ಪಾರ್ಲರ್ ಗೆ ದಾಳಿ ನಡೆಸಿದಾಗ ಅಲ್ಲಿದ್ದ ಯುವತಿಯೊಬ್ಬಳನ್ನು ರಕ್ಷಿಸಲಾಗಿದ್ದು ,  ಪಾರ್ಲರ್ ಮ್ಯಾನೇಜರ್ ಮತ್ತು ಇಬ್ಬರು ಗ್ರಾಹಕರನ್ನು ಬಂಧಿಸಲಾಗಿದೆ .

ಬಂಧಿತರನ್ನು ಪಾರ್ಲರ್ ಮ್ಯಾನೇಜರ್ ಗುಣಪಾಲ , ಗ್ರಾಹಕರಾದ ಕೇರಳ ಮೂಲದ ಜಾನ್, ಗುರುಪುರದ ಪ್ರವೀಣ್  ಎಂದು ಗುರುತಿಸಲಾಗಿದೆ.

ಆರೋಪಿಗಳು ಎದುರಿನ ಬಾಗಿಲಿಗೆ ಬೀಗ ಹಾಕಿ ಹಿಂಬದಿ ಬಾಗಿಲಿನ ಮೂಲಕ ಅಕ್ರಮವಾಗಿ ಕೃತ್ಯ ನಡೆಸುತ್ತಿದ್ದರೆನ್ನಲಾಗಿದೆ.

ಅಪರಾಧ ಪತ್ತೆ ದಳ ವಿಭಾಗದ ಎಸಿಪಿ ಉದಯ ನಾಯಕ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು , ತಂಡದಲ್ಲಿ ಬರ್ಕೆ ಠಾಣಾ ಇನ್‌ಸ್ಪೆಕ್ಟರ್ ರಾಜೇಶ್, ಪಿಎಸ್‌ಐ ನರೇಂದ್ರ, ಸಿಬ್ಬಂದಿ ಕಿಶೋರ್, ರಾಜೇಶ್, ಜಯರಾಮ್, ಗುಣವಂತಿ, ಮತ್ತು ವಿಜಯ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News