ವಾಮಂಜೂರು ಶಾಲೆಯಲ್ಲಿ ವಿಶಿಷ್ಟವಾಗಿ ಗಣರಾಜ್ಯೋತ್ಸವ ಆಚರಿಸಿದ ಬ್ಲಡ್ ಹೆಲ್ಪ್ಲೈನ್ ಕರ್ನಾಟಕ
ಮಂಗಳೂರು, ಜ.27: 68ನೆ ಗಣರಾಜ್ಯೋತ್ಸವದ ಅಂಗವಾಗಿ ಬ್ಲಡ್ ಹೆಲ್ಪ್ಲೈನ್ ಕರ್ನಾಟಕ ವಾಟ್ಸ್‌ಆ್ಯಪ್ ಗ್ರೂಪ್ ವಾಮಂಜೂರಿನ ಎಸ್.ಡಿ.ಎಂ. ಮಂಗಳಜ್ಯೋತಿ ಸಮಗ್ರ ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿ ಹಾಗೂ ಜ್ಯೂಸ್ ನೀಡುವ ಮೂಲಕ ವಿಶಿಷ್ಟವಾಗಿ ಆಚರಿಸಿತು.
ಗ್ರೂಪ್‌ನ ಅಡ್ಡೂರು ವಲಯದ ಅಡ್ಮಿನ್ ಡಾ.ಇ.ಕೆ.ಎ.ಸಿದ್ದೀಕ್ ಅಡ್ಡೂರು ಶಾಲಾ ಮುಖ್ಯೋಪಾಧ್ಯಾಯರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಿದರು.
ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುವ ಮೂಲಕ ಮಾದರಿಯಾದ ಬ್ಲಡ್ ಹೆಲ್ಪ್ಲೈನ್ ಕರ್ನಾಟಕವು ಕಳೆದ ಐದು ತಿಂಗಳ ಹಿಂದೆ ಪ್ರಾರಂಭವಾದ ವಾಟ್ಸ್‌ಆ್ಯಪ್ ಗ್ರೂಪ್ ಅದೆಷ್ಟೋ ತುರ್ತು ರಕ್ತವನ್ನು ನಿಗದಿತ ಸಮಯದಲ್ಲಿ ಶೇಖರಿಸುವಲ್ಲಿ ಯಶಸ್ವಿಯಾಗಿ 7ನೆ ರಕ್ತದಾನ ಶಿಬಿರದತ್ತ ದಾಪುಗಾಲಿಡುತ್ತಿದೆ. ವಿದ್ಯಾರ್ಥಿಗಳಿಗೆ ರಕ್ತದಾನದ ಬಗ್ಗೆ ಅರಿವು ಮೂಡಿಸಲಾಯಿತು.
ಬ್ಲಡ್ ಹೆಲ್ಪ್ಲೈನ್ ಕರ್ನಾಟಕದ ಸ್ಥಾಪಕ ಅಡ್ಮಿನ್ ನಿಸಾರ್ ದಮ್ಮಾಮ್, ಉಳ್ಳಾಲ ಇಕ್ಬಾಲ್ ಕೆನರಾ, ಆರಿಫ್ ಉಳಾಯಿಬೆಟ್ಟು, ಶರೀಫ್ ಇಕ್ರಾ ಉಳಾಯಿಬೆಟ್ಟು, ಅಬ್ದುಲ್ ಕುಂಞಿ ಉಳಾಯಿಬೆಟ್ಟು, ಅಬ್ದುಲ್ ರಹ್ಮಾನ್ ಉಳಾಯಿಬೆಟ್ಟು, ಅಡ್ಡೂರು ವಲಯದ ಎಡ್ಮಿನ್ ಮುಸ್ತಫಾ ದೆಮ್ಮಲೆ ಅಡ್ಡೂರು, ಎ.ಕೆ.ರಿಯಾಝ್ ದಿಲ್ಶಾನ್ ಉಳ್ಳಾಲ, ಬಶೀರ್ ಕೃಷ್ಣಾಪುರ, ನವಾಝ್ ಉಳ್ಳಾಲ ಮತ್ತು ಇರ್ಝಾನ್ ಅಡ್ಡೂರು, ಮೆಹತಾಬ್ ಎಂ.ಕೆ.ಕೈಕಂಬ ಹಾಗೂ ಇನ್ನಿತರರು ಉಪಸ್ಥಿತರಿದ್ದರು.