ಜ.28: ಅಜ್ಜಿನಡ್ಕದಲ್ಲಿ ಸಲಫಿ ಸಮಾವೇಶ
Update: 2017-01-27 11:25 IST
ಮಂಗಳೂರು, ಜ.27: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಹಮ್ಮಿಕೊಂಡಿರುವ ಕುರ್‌ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಎಸ್.ಕೆ.ಎಸ್.ಎಂ.ನ ತಲಪಾಡಿ ಘಟಕದ ವತಿಯಿಂದ ಜ.28ರಂದು ಮಗ್ರಿಬ್ ನಮಾಝ್ ಬಳಿಕ ಕೆ.ಸಿ.ರೋಡ್ ಸಮೀಪದ ಅಜ್ಜಿನಡ್ಕದಲ್ಲಿ ಸಲಫಿ ಸಮಾವೇಶವು ಜರಗಲಿದೆ.
ಸಮಾವೇಶದಲ್ಲಿ ಹಿರಿಯ ವಿದ್ವಾಂಸ ಚುಯೈಲಿ ಅಬ್ದುಲ್ಲ ಮುಸ್ಲಿಯಾರ್‌ವರು ವಿಶೇಷ ಉಪನ್ಯಾಸ ನೀಡಲಿದ್ದಾರೆಂದು ಸಮಾವೇಶದ ಸಂಯೋಜಕ ಸಿ.ಎಂ.ಅಬ್ಬಾಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.