×
Ad

​ಜಾದೂಗಾರ್ತಿ ಪರ್ವಿನ್ ತಾಜ್‌ರಿಂದ ಎಜ್ಯು ಮ್ಯಾಜಿಕ್

Update: 2017-01-27 12:03 IST

ಪುತ್ತೂರು, ಜ.27: ಮಂಗಳೂರಿನ ಬ್ಯಾರೀಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ)ಯಲ್ಲಿ ಇತ್ತೀಚೆಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ GRAND-QUEST-2017 ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ, ಕಲಾಸೃಷ್ಟಿ ತಂಡದ ನಿರ್ದೇಶಕಿ, ಬಿಐಟಿಯ ಇಲೆಕ್ಟ್ರಾನಿಕ್ಸ್ ವಿಭಾಗದ ಪೊಫೆಸರ್ ಮುಬೀನಾ ಪರ್ವಿನ್ ತಾಜ್‌ರ ಎಜ್ಯು ಮ್ಯಾಜಿಕ್ ಜಾದೂ ಪ್ರದರ್ಶನ ಎಲ್ಲರ ಮನರಂಜಿಸಿತು.

ಈ ಸಂದರ್ಭ ಬಿಐಟಿಯ ಸಂಸ್ಥಾಪಕ ಸಯ್ಯದ್ ಮುಹಮ್ಮದ್ ಬ್ಯಾರಿಯವರು ಪರ್ವಿನ್ ತಾಜ್‌ರನ್ನು ಶ್ಲಾಘಿಸಿ, ಸನ್ಮಾನಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News