×
Ad

ಹಿಂದೂಐಕ್ಯವೇದಿ ಅಧ್ಯಕ್ಷೆ ಶಶಿಕಲಾ ಟೀಚರ್ ಶಾಲೆಗೆ ಗೈರು: ಹೆತ್ತವರು, ವಿದ್ಯಾರ್ಥಿಗಳಿಂದ ಆರೋಪ

Update: 2017-01-27 12:34 IST

ಪಾಲಕ್ಕಾಡ್,ಜ.27: ಹಿಂದೂ ಐಕ್ಯವೇದಿ ಇದರ ಕೇರಳ ಅಧ್ಯಕ್ಷೆ ಪಾಲಕ್ಕಾಡ್ ವಲ್ಲಪುಯ ಸ್ಕೂಲ್ ಅಧ್ಯಾಪಕಿ ಶಶಿಕಲಾ ಟೀಚರ್ ಮಕ್ಕಳಿಗೆ ತರಗತಿ ನಡೆಸುವುದಿಲ್ಲ ಎಂದು ಆರೋಪ ಕೇಳಿ ಬಂದಿದೆ. ಸ್ಕೂಲ್‌ಗೆ ಬಂದು ಹಾಜರಿ ಹಾಕಿ ಮಕ್ಕಳಿಗೆ ಪಾಠ ಹೇಳಿಕೊಡದೆ ಶಶಿಕಲಾ ಹೊರಟು ಹೋಗುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಮತ್ತು ಪೊಷಕರು ಆರೋಪಿಸಿದ್ದಾರೆ.

ವಲ್ಲಪ್ಪುಯವನ್ನು ಪಾಕಿಸ್ತಾನವೆಂದು ಕರೆದಿದ್ದ ಶಶಿಕಲಾರ ವಿರುದ್ಧ ಊರವರು ಮತ್ತು ವಿದ್ಯಾರ್ಥಿಗಳು ಕಳೆದ ನವೆಂಬರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಊರವರಿಗೆ ಶಶಿಕಲಾ ವಿವರಣೆ ನೀಡಿದ ಬಳಿಕ ಅಂದು ಪ್ರತಿಭಟನೆ ಕೊನೆಗೊಂಡಿತ್ತು.

ಕಳೆದ ನವೆಂಬರ್ ತಿಂಗಳಿಂದ ಈವರೆಗೂ ಶಶಿಕಲಾ ಮಕ್ಕಳಿಗೆ ಪಾಠ ಮಾಡಿಲ್ಲ.ನನ್ನ ವಿರುದ್ಧ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳಿಗೆ ಕಲಿಸದೆ ಶಶಿಕಲಾ ಪ್ರತಿಕಾರಕ್ಕಿಳಿದ್ದಾರೆ ಎಂದು ಊರವರು ಆರೋಪಿಸುತ್ತಿದ್ದಾರೆ. ಕ್ಲಾಸ್ ಮಾಡದೆ ಸಂಬಳ ತಿನ್ನುವ ಅಧ್ಯಾಪಕಿಯ ವಿರುದ್ಧ ಶಿಕ್ಷಣ ಇಲಾಖೆ ಕ್ರಮಕೈಗೊಳ್ಳಬೇಕೆಂದು ಮಕ್ಕಳ ಪೋಷಕರು ಹೇಳುತ್ತಿದ್ದಾರೆ.

ಪ್ರಧಾನಅಧ್ಯಾಪಕರಿಲ್ಲದ ಶಾಲೆಗೆ ತನಗೆ ವಹಿಸಿದ ಜವಾಬ್ದಾರಿ ಇರುವಾಗ ಮಾತ್ರ ತಾನು ಕ್ಲಾಸಿಗೆ ಹೋಗುವುದು ಎಂದು ಶಶಿಕಲಾ ಸ್ಪಷ್ಟಪಡಿಸಿದ್ದಾರೆಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News