×
Ad

‘ಕೃಷ್ಣಮೃಗ ಸಹಜ ಕಾರಣಗಳಿಂದ ಸತ್ತಿತ್ತು ’

Update: 2017-01-27 15:05 IST

ಜೋಧಪುರ,ಜ.27: ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಶುಕ್ರವಾರ ಇಲ್ಲಿಯ ನ್ಯಾಯಾಲಯದಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಿದರು. ಕೃಷ್ಣಮೃಗವು ಸಹಜ ಕಾರಣಗಳಿಂದ ಮೃತಪಟ್ಟಿದ್ದು, ತಾನದನ್ನು ಬೇಟೆಯಾಡಿರಲಿಲ್ಲ ಎಂದು ಅವರು ಪ್ರತಿಪಾದಿಸಿದರು.

ಕೃಷ್ಣಮೃಗವು ನೈಸರ್ಗಿಕ ಕಾರಣಗಳಿಂದ ಮೃತಪಟ್ಟಿದೆ ಎಂದು ತಿಳಿಸಿದ್ದ, ಡಾ.ನೇಪಾಲಿಯಾ ಅವರ ಮೊದಲ ವಿಧಿವಿಜ್ಞಾನ ವರದಿ ಮಾತ್ರ ನಿಜವಾಗಿದ್ದು, ಉಳಿದೆಲ್ಲ ಸಾಕ್ಷಾಧಾರಗಳು ಶುದ್ಧ ಸುಳ್ಳು ಎಂದು ಅವರು ಹೇಳಿದರು.

ಸಿಜೆಎಂ ದಲ್ಪತ್ ಸಿಂಗ್ ರಾಜಪುರೋಹಿತ ಅವರು 65ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಿದ್ದು, ಹೆಚ್ಚಿನ ಪ್ರಶ್ನೆಗಳಿಗೆ ಸಲ್ಮಾನ್ ‘ಗಲತ್(ತಪ್ಪು)’ ಎಂದು ಉತ್ತರಿಸಿದರು.

‘ಅಂದು ರಾತ್ರಿ ನೀವು ಬೇಟೆಗೆ ತೆರಳಿದ್ದೀರಾ? ’ ಎಂಬ ಪ್ರಶ್ನೆಗೆ ‘ಇಲ್ಲ ’ ಎಂದು ಅವರು ಉತ್ತರಿಸಿದರು.

ನಟ ಸೈಫ್ ಅಲಿಖಾನ್ ಅವರ ಹೇಳಿಕೆಯನ್ನೂ ನ್ಯಾಯಾಲಯವು ದಾಖಿಲಿಸಿ ಕೊಂಡಿತು.

ಜೋಧಪುರ ಸಮೀಪದ ಕಂಕಣಿ ಗ್ರಾಮದಲ್ಲಿ ‘ಹಮ್ ಸಾಥ್ ಸಾಥ್ ಹೈಂ’ ಹಿಂದಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ 1998,ಅ.1ರಂದು ರಾತ್ರಿ ಕೃಷ್ಣಮೃಗವನ್ನು ಬೇಟೆಯಾಡಿದ ಆರೋಪವನ್ನು ಸಲ್ಮಾನ್,ಸೈಫ್ ಹಾಗೂ ನಟಿಯರಾದ ನೀಲಂ,ಟಬ್ಬೂ ಮತ್ತು ಸೋನಾಲಿ ಬೆಂದ್ರೆ ಎದುರಿಸುತ್ತಿದ್ದಾರೆ.

ಇದೇ ನ್ಯಾಯಾಲಯವು ಜ.18ರಂದು ಸಲ್ಮಾನ್ ಅವರನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಆರೋಪಗಳಿಂದ ಮುಕ್ತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News