ಜ.31ರಂದು ಸಮಸ್ತ ನೇತಾರರ ಅನುಸ್ಮರಣೆ ಮತ್ತು ದುಆ ಮಜ್ಲಿಸ್
ಮೂಡುಬಿದಿರೆ, ಜ.27: ಮೂಡುಬಿದಿರೆ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಸೋಶಿಯೇಶನ್ ಇದರ ವತಿಯಿಂದ ಸಮಸ್ತ ನೇತಾರರ ಅನುಸ್ಮರಣೆ ಮತ್ತು ದುಆ ಮಜ್ಲಿಸ್ ಕಾರ್ಯಕ್ರಮವು ಜ.31ರಂದು ಇಲ್ಲಿನ ಬದ್ರಿಯಾ ಟೌನ್ ಜುಮಾ ಮಸೀದಿಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ದುಆ ಹಾಗೂ ಅನುಸ್ಮರಣಾ ಭಾಷಣವನ್ನು ಬೆಳ್ತಂಗಡಿ ಡಿ.ಐ.ಸಿ. ಅಧ್ಯಕ್ಷರಾದ ಅಸ್ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಸಮಸ್ತದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶೈಖುನಾ ಮಿತ್ತಬೈಲು ಅಬ್ದುಲ್ ಜಬ್ಬಾರ್ ಮುಸ್ಲಿಯಾರ್‌ರಿಗೆ ಸನ್ಮಾನ ನಡೆಯಲಿದೆ. ಜಂಇಯ್ಯತುಲ್ ಮುಅಲ್ಲಿಮೀನ್ ಮೂಡುಬಿದಿರೆ ರೇಂಜ್‌ನ ಅಧ್ಯಕ್ಷ ಅಬ್ದುಸ್ಸಲಾಂ ಯಮಾನಿ, ಬದ್ರಿಯಾ ಟೌನ್ ಜುಮಾ ಮಸೀದಿಯ ಮುದರ್ರಿಸ್ ಮುಸ್ತಫಾ ಯಮಾನಿ, ಮೂಡುಬಿದಿರೆ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಅಬ್ದುರ್ರಹ್ಮಾನ್, ಕಾರ್ಯದರ್ಶಿ ಶಬೀರ್ ಅಹ್ಮದ್, ಬದ್ರಿಯಾ ಟೌನ್ ಜುಮಾ ಮಸೀದಿಯ ಅಧ್ಯಕ್ಷ ಎಂ.ಎಚ್. ಮುಹಮ್ಮದ್ ಇಕ್ಬಾಲ್, ಕೋಶಾಧಿಕಾರಿ ಬಾವುದ್ದೀನ್, ಕಾರ್ಯದರ್ಶಿ ಅಬ್ದುಲ್ ಅಝೀಝ್ ಮತ್ತಿತರು ಉಪಸ್ಥಿತರಿರುವರು.