×
Ad

ಖಾಸಗಿ ಕಾಲೇಜುಗಳು ವ್ಯಾಪಾರಿ ಸಂಸ್ಥೆಗಳಾಗಿವೆ: ಪಿಣರಾಯಿ

Update: 2017-01-27 17:35 IST

ತಿರುವನಂತಪುರಂ,ಜ. 27: ಖಾಸಗಿ ಕಾಲೇಜುಗಳ ವಿರುದ್ಧ ಮತ್ತೊಮ್ಮೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಾಪ್ರಹಾರ ಹರಿಸಿದ್ದು, ಈಗ ಖಾಸಗಿ ಕಾಲೇಜುಗಳು ವ್ಯಾಪಾರಿ ಸಂಸ್ಥೆಗಳಾಗಿ ಬಿಟ್ಟಿವೆ. ಇದು ಅಬಕಾರಿ ವ್ಯಾಪಾರಕ್ಕಿಂತ ಉತ್ತಮ ಎಂದು ಕೆಲವರು ಭಾವಿಸಿದ್ದಾರೆಂದು ಮುಖ್ಯಮಂತ್ರಿ ಹೇಳಿದ್ದಾರೆ.ಅಬಕಾರಿಯಲ್ಲಿ ಸಿಗುವುದಕ್ಕಿಂತ ಹೆಚ್ಚು ಲಾನ ವಿದ್ಯಾಸಂಸ್ಥೆಗಳಲ್ಲಿ ಸಿಗುತ್ತದೆ ಎಂದು ನಿರೀಕ್ಷೆ ಇರುವಾಗ ಅದು ವ್ಯಾಪಾರಿ ಸಂಸ್ಥೆಗಳಂತಾಗದಿರುವುದೇ?. ಎ.ಕೆ. ಆಂಟನಿ ಮುಖ್ಯಮಂತ್ರಿಯಾಗಿದ್ದಾಗ ಅವರು ಸದುದ್ದೇಶದಿಂದ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡಿದ್ದರು.

ಆದರೆ ನಿಯಂತ್ರಣ ಮತ್ತು ಮಾನದಂಡಗಳಿಲ್ಲದೆ ಖಾಸಗಿ ಕಾಲೇಜುಗಳು ಆರಂಭವಾದವು. ಈಗ ಅವು ವ್ಯಾಪಾರಿ ಸಂಸ್ಥೆಆಗಿಬಿಟ್ಟಿವೆ. ಸ್ವಯಂ ಆಂಟನಿಯವರೇ ಕಟುವಾಗಿ ಟೀಕಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಅವರು ರಾಜ್ಯಮಟ್ಟದ ಸಾರ್ವಜನಿಕ ಶಿಕ್ಷಣ ಸಂರಕ್ಷಣ ಯಜ್ಞವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ವಿದ್ಯಾಭ್ಯಾಸ ಕ್ಷೇತ್ರದ ವಿಶೇಷ ಪರಿಸ್ಥಿತಿಯಯನ್ನು ಉಪಯೋಗಿಸಿ ಹಲವಾರು ಸಂಸ್ಥೆಗಳು ಇಲ್ಲಿ ಬೆಳದು ಬಂದಿವೆ. ಇಂತಹ ಸಂಸ್ಥೆಗಳಿಗೆ ಜನರನ್ನು ಸೆಳೆಯುವ ವಿಶೇಷ ಉಪಾಯವಿದೆ.

ತದ್ಬಲವಾಗಿ ಸಾರ್ವಜನಿಕ ವಿದ್ಯಾಭ್ಯಾಸ ಸಂಸ್ಥೆಯಲ್ಲಿ ಕಲಿತು ಉನ್ನತ ಸ್ಥಾನಕ್ಕೆ ತಲುಪಿದವರು ಕೂಡಾ ಖಾಸಗಿ ಸಂಸ್ಥೆಗಳಲ್ಲಿ ತಾವು ಕಲಿತರೆ ಉಪಯುಕ್ತ ಎಂದು ತಿಳಿಯುತ್ತಿದ್ದಾರೆ.ಇದರಿಂದಾಗಿ ನಮ್ಮ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಕುಸಿತ ಸಂಭವಿಸಿತು ಎಂದು ಮುಖ್ಯಮಂತ್ರಿ ಹೇಳಿದರು.ಅನುದಾನ ರಹಿತ ಕ್ಷೇತ್ರದ ಶಾಲೆಗಳಿಗೆ ಹೋಲಿಸಿದರೆ ಸಾರ್ವಜನಿಕ ವಿದ್ಯಾಭ್ಯಾಸ ಸಂಸ್ಥೆಗಳ ಸೌಕರ್ಯ ಕಡಿಮೆಯಿದೆ.

\ಮಕ್ಕಳನ್ನುಆಕರ್ಷಿಸಲು ಅನುದಾನ ರಹಿತ ಸಂಸ್ಥೆಗಳು ಬಹಳಷ್ಟು ಕೆಲಸ ಮಾಡಬೇಕಿದೆ. ಈಗ ಮನೆಯ ಹತ್ತಿರದ ಶಾಲೆಗೆ ನಡೆದು ಹೋಗಲು ಯಾರಿಗೂ ಇಷ್ಟವಿಲ್ಲ. ಹತ್ತುಗಂಟೆಗೆ ಆರಂಭಗೊಳ್ಳುವ ಶಾಲೆಗೆ ಮಕ್ಕಳನ್ನು ಏಳೂವರೆಗಂಟೆಗೆ ವಾಹನಕ್ಕೆ ಹತ್ತಿಸಲಾಗುತ್ತಿದೆ. ವಾಹನ ಅಲ್ಲಿಲ್ಲಿ ಸುತ್ತಾಡಿ ಒಂಬತ್ತು ಮುಕ್ಕಾಲು ಗಂಟೆಗೆ ಶಾಲೆಗೆ ತಲುಪುತ್ತಿದೆ. ಈರೀತಿ ಇಂದಿನ ಶಿಕ್ಷಣ ರೀತಿಯೆಂದು ಮುಖ್ಯಮಂತ್ರಿ ಹೇಳಿರುವುದಾಗಿ ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News