ದಾಯ್ಜಿವರ್ಲ್ಡ್ ವಾರಪತ್ರಿಕೆಯಿಂದ ‘ಸ್ವಾಭಿಮಾನ್ ಪ್ರಶಸ್ತಿಗೆ ಪ್ರವೇಶ ಪತ್ರಗಳ ಆಹ್ವಾನ
ಮಂಗಳೂರು, ಜ.27: ಮಾಧ್ಯಮ ಕ್ಷೇತ್ರದ ಅಂತರ್ಜಾಲ ತಾಣದಲ್ಲಿ ತನ್ನದೇ ಛಾಪು ಮೂಡಿಸಿರುವ ದಾಯ್ಜಿ ವರ್ಲ್ಡ್ ಡಾಟ್ ಕಾಂನ ಸಹೋದರ ಸಂಸ್ಥೆ ದಾಯ್ಜಿವರ್ಲ್ಡ್ ವೀಕ್ಲಿ ‘ಸ್ವಾಭಿಮಾನ್ ಪ್ರಶಸ್ತಿ 2017’ಗೆ ಪ್ರವೇಶ ಪತ್ರಗಳನ್ನು ಆಹ್ವಾನಿಸಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕರಾವಳಿ ಜಿಲ್ಲೆಯ ಭಿನ್ನ ಸಾಮರ್ಥ್ಯದ ಸಾಧಕರನ್ನು ಗೌರವಿಸುವ 7ನೆ ವರ್ಷದ ಸ್ವಾಭಿಮಾನಿ ಪ್ರಶಸ್ತಿಗೆ ಯಾವುದೇ ಮಾನದಂಡ ಇರುವುದಿಲ್ಲ. ಮಾನಸಿಕವಾಗಿ/ದೈಹಿಕವಾಗಿ ಭಿನ್ನ ಸಾಮರ್ಥ್ಯವನ್ನು ಹೊಂದಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಮಂದಿ ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.
ಪ್ರಶಸ್ತಿಗೆ ಯೋಗ್ಯರಾಗಿರುವ ಮಂದಿಯ ಪ್ರವೇಶ ಪತ್ರವನ್ನೂ ಸೂಕ್ತ ದಾಖಲೆ ಪತ್ರಗಳೊಂದಿಗೆ ಯಾರೂ ಕಳುಹಿಸಬಹುದು. ಅರ್ಹರ ಗುರುತು, ಹುಟ್ಟಿನ ದಿನಾಂಕ, ಸ್ಥಳ, ಮಾನಸಿಕವಾಗಿ/ದೈಹಿಕವಾಗಿ ಭಿನ್ನಸಾಮರ್ಥ್ಯವನ್ನು ಹೊಂದಿರುವ ದೃಢತೆ ಪತ್ರ, ಸಾಧನೆಯ ಸಮಗ್ರ ವಿವರ ಅತ್ಯಗತ್ಯ. ಜೊತೆಗೆ ಸಾಧಕರ ಸಂಪೂರ್ಣ ಮಾಹಿತಿ ಜೊತೆಗೆ ಭಾವಚಿತ್ರವನ್ನು ಲಗತ್ತಿಸಿ, ಸಂಪರ್ಕ ವಿಳಾಸದೊಂದಿಗೆ ಕಳುಹಿಸಬೇಕು.
ಪ್ರವೇಶ ಪತ್ರಗಳನ್ನು ಕಳುಹಿಸಿಕೊಡುವ ಮುನ್ನ ಈ ಅಂಶ ನೆನಪಿನಲ್ಲಿಡಿ...
1. ಇತ್ತೀಚಿನ ಭಾವಚಿತ್ರದ ಜೊತೆಗೆ ದೈಹಿಕವಾಗಿ ಭಿನ್ನ ಸಾಮರ್ಥ್ಯದ ಬಗ್ಗೆ ದಾಖಲೆ ಅಗತ್ಯ
2. ಭಾರತೀಯನಾಗಿರಬೇಕು. ಕಡ್ಡಾಯವಾಗಿ ದಕ್ಷಿಣ ಕನ್ನಡ/ ಉಡುಪಿ ಕರಾವಳಿ ಮೂಲದವರಾಗಿರಬೇಕು.
3. ಯಾವುದೇ ಧರ್ಮ, ಜಾತಿ, ಭಾಷೆ, ಸಮುದಾಯದವರಾಗಿರಬಹುದು. ಆದರೆ ಅದಕ್ಕೆ ಸಂಬಂಧಿಸಿದ ದಾಖಲೆ ಅತೀ ಅಗತ್ಯ. ದೈಹಿಕ ಸಾಮರ್ಥ್ಯದಿಂದ ಮಾಡಿದ ಸಾಧನೆ ಬಗ್ಗೆ ದಾಖಲೆಗಳು ಅಗತ್ಯ.
4. ವ್ಯಕ್ತಿ ಅಥವಾ ಸಂಬಂಧಿಕರು ನಾಮ ನಿರ್ದೇಶನ ಮಾಡಬಹುದು.
5. ಪೋಸ್ಟ್/ಈ ಮೇಲ್/ಕೊರಿಯರ್ ಮೂಲಕ ಪ್ರವೇಶ ಪತ್ರ, ಸಮಗ್ರ ವಿವರ ಕಳುಹಿಸಿಕೊಡಬಹುದು.
6. ಫೆ.15,2017 ಪ್ರವೇಶ ಪತ್ರಗಳನ್ನು ಕಳುಹಿಸಿಕೊಡಲು ಕೊನೆ ದಿನಾಂಕ.
7. ಜೂ.2017ರ ದಾಯ್ಜಿವರ್ಲ್ಡ್ ವೀಕ್ಲಿಯ 7ನೆ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
9. ಪ್ರಶಸ್ತಿ ಆಯ್ಕೆಗೆ ಸಂಬಂಧಿಸಿದ ಸಂಪೂರ್ಣ ಹಕ್ಕು ತೀರ್ಪುಗಾರರದ್ದಾಗಿದೆ.
ಪ್ರವೇಶ ಪತ್ರಗಳನ್ನು ಕಳುಹಿಸಿಕೊಡಬೇಕಾದ ವಿಳಾಸ:
ಪ್ರಧಾನ ಸಂಪಾದಕರು,
ದಾಯ್ಜಿವರ್ಲ್ಡ್ ಪಬ್ಲಿಕೇಶನ್ ಪ್ರೈ.ಲಿ.
ದಾಯ್ಜಿವರ್ಲ್ಡ್ ಕಾರ್ಪೋರೇಟ್ ಆಫೀಸ್,
ದಾಯ್ಜಿವರ್ಲ್ಡ್ ರೆಸಿಡೆನ್ಶಿ, ಏರ್‌ಪೋರ್ಟ್ ರೋಡ್,
ಬೊಂದೇಲ್, ಮಂಗಳೂರು- 575008.
ದಕ್ಷಿಣ ಕನ್ನಡ , ಕರ್ನಾಟಕ.
ಪ್ರವೇಶ ಪತ್ರದ ಮೇಲೆ ‘ಸ್ವಾಭಿಮಾನ್ ಪ್ರಶಸ್ತಿ’ ಎಂಬ ಬಗ್ಗೆ ಖಡ್ಡಾಯವಾಗಿ ಉಲ್ಲೇಖಿಸತಕ್ಕದ್ದು.
ಅಂತರ್ಜಾಲ ತಾಣ: weekly@daijiworld.com ಇನ್ನಷ್ಟು ಮಾಹಿತಿ, ವಿವರಗಳಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 0824 298 2028.