×
Ad

ಜ.29ರಂದು ಎವರಿ ಡೇ ಸೂಪರ್ ಮಾರ್ಕೆಟ್ ಉದ್ಘಾಟನೆ

Update: 2017-01-27 19:01 IST

ಮಂಗಳೂರು , ಜ.27 : ಮಂಗಳೂರಿನ ಮೊದಲ ಸಾವಯವ ಸೂಪರ್ ಮಾರ್ಕೆಟ್ ಎವರಿ ಡೇ ಸೂಪರ್ ಮಾರ್ಕೆಟ್ ನಗರದ ಬೆಂದುರ್‌ವೆಲ್ ಸರ್ಕಲ್‌ನ ಎಸ್ಸೆಲ್ ವಿಲ್‌ಕೋನ್‌ನಲ್ಲಿ ಜ.29ರಂದು ಉದ್ಘಾಟನೆಯಾಗಲಿದೆ.

ಸೂಪರ್ ಮಾರ್ಕೆಟ್‌ವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ದಿ ಪೆಟ್ ಬಾರೋ ಪ್ರಾಜೆಕ್ಟ್‌ನ ಮುಖ್ಯಸ್ಥ ಲೆ.ಸಿಡಿಆರ್ ಸಿ.ವಿ. ಪ್ರಕಾಶ್, ಕಾರ್ಪೋರೇಟರ್ ನವೀನ್ ಡಿ ಸೋಜ, ಯೆನೆಪೋಯ ಗ್ರೂಪ್ ಮುಖ್ಯಸ್ಥ ವೈ. ಮಹಮ್ಮದ್ ಕುಂಞಿ, ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಭಾಗವಹಿಸಲಿದ್ದಾರೆ.

ಎವರಿ ಡೇ ಸೂಪರ್ ಮಾರ್ಕೆಟ್‌ನಲ್ಲಿ ಡ್ರೈ ಫ್ರುಟ್ಸ್, ಸ್ಟೆಶನರಿ, ಎಸ್ಸೆಸರ್ಸಿ, ಕಾಸ್ಮೆಟಿಕ್, ತಾಜಾ ಮೀನು, ಮಾಂಸ, ಮನೆ ಸಾಮಗ್ರಿಗಳು, ಮಕ್ಕಳಿಗೆ ಬೇಕಾದ ಆಟಿಕೆಗಳು, ಬೇಕರಿ ಐಟಂಗಳು, ಐಸ್‌ಕ್ರೀಮ್‌ಗಳು ಸೇರಿದಂತೆ ನಾನಾ ವಸ್ತುಗಳು ಇಲ್ಲಿ ಸಿಗಲಿದೆ. ಇದರ ಜತೆಯಲ್ಲಿ ಬೇಕ್ ಡೇ ವಿಭಾಗ ಹಾಗೂ ಫಾರ್ಮ್ ಬ್ಯಾಗ್ ಎನ್ನುವ ವಿಶೇಷವಾದ ವಿಭಾಗಗಳಲ್ಲಿ ಗ್ರಾಹಕರಿಗೆ ಬೇಕಾದ ವಸ್ತುಗಳು ಸಿಗಲಿದೆ.

ಅದರಲ್ಲೂ ಮುಖ್ಯವಾಗಿ ತಾಜಾ ಹಾಗೂ ಸಾವಯವ ತರಕಾರಿಗಳು ಇಲ್ಲಿ ಲಭ್ಯವಾಗಲಿದೆ. ಉಚಿತ ಹೋಮ್ ಡೆಲಿವರಿ ವ್ಯವಸ್ಥೆ ಸೇರಿದಂತೆ ಸೂಪರ್ ಮಾರ್ಕೆಟ್‌ಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನು ಪಾರ್ಕ್ ಮಾಡುವಂತಹ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News