×
Ad

ಬ್ರಿಟಿಶ್ ಪ್ರಧಾನಿಯ ಬದಲು ನೀಲಿಚಿತ್ರಗಳ ನಟಿಯ ಹೆಸರು ಹಾಕಿದ ಶ್ವೇತಭವನ!

Update: 2017-01-27 19:26 IST

ವಾಶಿಂಗ್ಟನ್, ಜ. 27: ಅಮೆರಿಕಕ್ಕೆ ಭೇಟಿ ನೀಡುತ್ತಿರುವ ಬ್ರಿಟನ್ ಪ್ರಧಾನಿ ತೆರೇಸಾ ಮೇ(Theresa May)ಅವರ ಹೆಸರನ್ನು ಅವರ ಅಧಿಕೃತ ಪ್ರವಾಸ ವೇಳಾಪಟ್ಟಿಯಲ್ಲಿ ಶ್ವೇತಭವನ ಮೂರು ಬಾರಿ ತಪ್ಪಾಗಿ ಬರೆದಿದೆ. ಅವರ ಹೆಸರನ್ನು ನೀಲಿಚಿತ್ರಗಳ ನಟಿಯ ಹೆಸರಿನಂತೆ ಬರೆದಿರುವುದು ಗೊಂದಲ ಹುಟ್ಟಿಸುತ್ತದೆ.

ಓವಲ್ ಕಚೇರಿಯಲ್ಲಿ ದ್ವಿಪಕ್ಷೀಯ ಮಾತುಕತೆ, ಮಧ್ಯಾಹ್ನದ ಊಟದ ಜೊತೆ ಅಧಿಕೃತ ಮಾತುಕತೆ ಮತ್ತು ಬಳಿಕ ನಡೆಯುವ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತೆರೇಸಾ ಮೇ ಭಾಗವಹಿಸುವ ಅಧಿಕೃತ ವೇಳಾಪಟ್ಟಿಯಲ್ಲಿ ಅವರ ಹೆಸರಿನ ‘ಎಚ್’ ಅಕ್ಷರವನ್ನು ಕೈಬಿಡಲಾಗಿದೆ. ಆದಾಗ್ಯೂ, ಇತರ ಕಡೆಗಳಲ್ಲಿ ಹೆಸರನ್ನು ಸರಿಯಾಗಿ ಬರೆಯಲಾಗಿದೆ ಎಂದು ‘ಮಿರರ್’ ವರದಿ ಮಾಡಿದೆ. ಭೇಟಿ ಶುಕ್ರವಾರ ನಡೆಯುತ್ತದೆ.

ಬಳಿಕ ಸರಿಯಾದ ಹೆಸರನ್ನು ಒಳಗೊಂಡ ಪರಿಷ್ಕೃತ ವೇಳಾಪಟ್ಟಿಯನ್ನು ಹೊರಡಿಸಲಾಗಿದೆ.

Teresa Mayಮಾಜಿ ರೂಪದರ್ಶಿ ಹಾಗೂ ನೀಲಿಚಿತ್ರಗಳ ನಟಿಯ ಹೆಸರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News