×
Ad

ಒಂಟಿ ವೃದ್ಧ ಸಾವು : ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

Update: 2017-01-27 19:57 IST

ಮೂಡುಬಿದಿರೆ , ಜ.27 : ಸಂಬಂಧಿಕರ‍್ಯಾರೂ ಜೊತೆಗಿರದೇ ಒಂಟಿಯಾಗಿಯೇ ಗುಡಿಸಲೊಂದರಲ್ಲಿ 30 ವರ್ಷಗಳನ್ನು ಕಳೆದಿರುವ ವೃದ್ಧರೋರ್ವರು ಅನಾರೋಗ್ಯದಿಂದ ನಿಧನ ಹೊಂದಿದ್ದು , ಕೊಳೆತ ಸ್ಥಿತಿಯಲ್ಲಿ ಎರಡು ದಿನಗಳ ಬಳಿಕ ಶವಪತ್ತೆಯಾದ ಘಟನೆ ಕಡಂದಲೆಯಲ್ಲಿ ನಡೆದಿದೆ.

ಪಾಲಡ್ಕ ಪಂಚಾಯತ್ ವ್ಯಾಪ್ತಿಯ ಕಡಂದಲೆ ಪೂಪಾಡಿಕಲ್ಲಿನ ನಿವಾಸಿ ಇಮ್ಯಾನುವೆಲ್ ಸಿಕ್ವೇರಾ (75) ಮೃತಪಟ್ಟ ವೃದ್ಧ .

ಕಳೆದ ಎರಡು ದಿನಗಳಿಂದ ಈ ವೃದ್ಧ ಕಾಣದಿದ್ದಾಗ ಅಕ್ಕಪಕ್ಕದ ಮನೆಯವರು ಗುಡಿಸಲಿನ ಬಳಿ ತೆರಳಿ ನೋಡಿದ್ದಾರೆ. ಈ ಸಂದರ್ಭ ಇಮ್ಯಾನುವೆಲ್ ಒಳಗಡೆ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News