ಉಳ್ಳಾಲ :ರೈಲು ಢಿಕ್ಕಿ , ವ್ಯಕ್ತಿ ಸಾವು
Update: 2017-01-27 20:50 IST
ಉಳ್ಳಾಲ , ಜ.27 : ರೈಲು ಢಿಕ್ಕಿ ಹೊಡೆದು ವ್ಯಕ್ತಿಯೊರ್ವರು ಮೃತಪಟ್ಟಿರುವ ಘಟನೆ ಕೋಟೆಕಾರು ಬೀರಿ ಸಮೀಪದ ಪೆರಿಬೈಲು ಸಮೀಪ ಶುಕ್ರವಾರ ಸಂಜೆ ನಡೆದಿದೆ.
ಪೆರಿಬೈಲು ನಿವಾಸಿ ನಾರಾಯಣ ಎಂಬವರ ಪುತ್ರ ಲಕ್ಷ್ಮಣ್(40)ಮೃತ ದುರ್ದೈವಿ.
ಕೂಲಿ ಕೆಲಸ ನಿರ್ವಹಿಸುತ್ತಿರುವ ಇವರು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸು ಆಗುತ್ತಿರುವ ಸಂದರ್ಭ ಹಳಿಯನ್ನು ದಾಟುವ ವೇಳೆ ಘಟನೆ ಸಂಭವಿಸಿದೆ. ಸೊಂಟದ ಭಾಗಕ್ಕೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಮಂಗಳೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.