×
Ad

ಇಂದಿರಾ ಪ್ರಾದೇಶಿಕ ಗುಂಪು ರಚಿಸಲು ಝಿಯಾ ಮನ ಒಲಿಸಲು ಯತ್ನಿಸಿದ್ದರು

Update: 2017-01-27 21:19 IST

ವಾಶಿಂಗ್ಟನ್, ಜ. 27: ಅಫ್ಘಾನಿಸ್ತಾನದ ಮೇಲೆ ಸೋವಿಯತ್ ಒಕ್ಕೂಟ ನಡೆಸಿದ ಆಕ್ರಮಣದಿಂದ ಚಿಂತಿತರಾದ ಪ್ರಧಾನಿ ಇಂದಿರಾ ಗಾಂಧಿ, ‘ಆಕ್ರಮಣ’ವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಭಾರತ ಪ್ರಾಯೋಜಕತ್ವದ ಪ್ರಾದೇಶಿಕ ವ್ಯೆಹಕ್ಕೆ ಸೇರ್ಪಡೆಗೊಳ್ಳುವಂತೆ 1980ರಲ್ಲಿ ಪಾಕಿಸ್ತಾನದ ಅಧ್ಯಕ್ಷ ಝಿಯಾ ಉಲ್ ಹಕ್‌ರ ಮನವೊಲಿಸಲು ಯತ್ನಿಸಿದ್ದರು ಎಂದು ರಹಸ್ಯಮುಕ್ತಗೊಂಡ ಸಿಐಎ ವರದಿಯೊಂದು ತಿಳಿಸಿದೆ.

ಸೋವಿಯತ್ ತನ್ನ ‘ಚಟುವಟಿಕೆಗಳನ್ನು’ ಅಫ್ಘಾನಿಸ್ತಾನಕ್ಕೆ ಸೀಮಿತಗೊಳಿಸುವಂತೆ ಅದರ ಮೇಲೆ ರಾಜತಾಂತ್ರಿಕ ಒತ್ತಡ ಹೇರುವುದಕ್ಕಾಗಿ ಪ್ರಾದೇಶಿಕ ಗುಂಪೊಂದನ್ನು ರಚಿಸಲು ಇಂದಿರಾ ಗಾಂಧಿ ಬಯಸಿದ್ದರು ಎಂದು ವರದಿ ಹೇಳಿದೆ.

ಅದೇ ವೇಳೆ, ತನ್ನನ್ನು ಹೆದರಿಸಲು ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ನೆಲೆಸಿರುವ ಉದ್ವಿಗ್ನತೆಯ ಪ್ರಯೋಜನವನ್ನು ಭಾರತ ಪಡೆದುಕೊಳ್ಳಬಹುದು ಅಥವಾ ತನ್ನ ಪರಮಾಣು ಸ್ಥಾವರಗಳ ಮೇಲೆ ಭಾರತ ಮುನ್ನೆಚ್ಚರಿಕಾ ದಾಳಿ ನಡೆಸಬಹುದು ಎಂಬ ಕಳವಳವನ್ನೂ ಪಾಕಿಸ್ತಾನ ಹೊಂದಿತ್ತು.

ಆದರೆ, ಭಾರತೀಯ ಪ್ರಸ್ತಾಪವನ್ನು ತಿರಸ್ಕರಿಸಿದ ಪಾಕಿಸ್ತಾನ, ಅದು ಭಾರತದ ‘ಯಜಮಾನ’ ಪ್ರವೃತ್ತಿಯನ್ನು ತೋರಿಸುತ್ತದೆ ಎಂದು ಬಣ್ಣಿಸಿತ್ತು. ಬದಲಿಗೆ, ಅಫ್ಘಾನಿಸ್ತಾನದಿಂದ ಒದಗಬಹುದಾದ ಸೋವಿಯರ್ ಬೆದರಿಕೆಯನ್ನು ಎದುರಿಸಲು ಶಸ್ತ್ರಾಸ್ತ್ರಗಳನ್ನು ನೀಡುವ ಅಮೆರಿಕದ ಕೊಡುಗೆಯನ್ನು ಒಪ್ಪಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News