×
Ad

ಜ.29ರಂದು ‘‘ಇನ್‌ಲ್ಯಾಂಡ್ ಸಿಯೋನ್’’ ಉದ್ಘಾಟನೆ

Update: 2017-01-27 21:21 IST
ಇನ್‌ಲ್ಯಾಂಡ್‌ ಇನ್ಫ್ರಾಸ್ಟ್ರಕ್ಚರ್ ಆಡಳಿತ ಮಂಡಳಿಯ ನಿರ್ದೇಶಕ ಸಿರಾಜ್ ಅಹಮ್ಮದ್

ಮಂಗಳೂರು, ಜ.27: ನಗರದ ಪ್ರತಿಷ್ಠಿತ ಬಿಲ್ಡರ್ ಹಾಗೂ ಡೆವಲಪರ್ಸ್‌ ಸಂಸ್ಥೆ ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್‌ ಪ್ರೈ. ಲಿಮಿಟೆಡ್‌ನವರು ನಗರದ ಫಳ್ನೀರ್ ಮುಖ್ಯ ರಸ್ತೆಯ ಪರಿಸರದಲ್ಲಿ ವಿನೂತನ ಶೈಲಿಯಲ್ಲಿ ನಿರ್ಮಿಸಿರುವ ‘ಇನ್‌ಲ್ಯಾಂಡ್ ಸಿಯೋನ್’ ವಸತಿ ಸಮುಚ್ಚಯ ಜ.29ರಂದು ಉದ್ಘಾಟನೆಗೊಳ್ಳಲಿದೆ.

ನೂತನ ವಸತಿ ಸಮುಚ್ಚಯವನ್ನು ಅಂದು ಸಂಜೆ 7ಕ್ಕೆ ಮುಖ್ಯ ಸಂಚಾರಿ ಮೇಲ್ವಿ ಚಾರಕ ಜೋ ಗೊನ್ಸಾಲ್ವಿಸ್ ಉದ್ಘಾಟಿ ಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಜೆ.ಆರ್.ಲೋಬೊ, ಕಾರ್ಪೊರೇಟರ್ ಅಬ್ದುಲ್ ರವೂಫ್, ಕ್ರೆಡೈ ಅಧ್ಯಕ್ಷ ಡಿ.ಬಿ. ಮೆಹ್ತಾ ಭಾಗವಹಿಸುವರು.

‘ಇನ್‌ಲ್ಯಾಂಡ್ ಸಿಯೋನ್’ ಉನ್ನತ ದರ್ಜೆಯ ಅತ್ಯಾಧುನಿಕ ಸೌಲಭ್ಯಗಳ ಉತ್ಕೃಷ್ಟ ಗುಣಮಟ್ಟದ ಐಶಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ. ಐದು ಅಂತಸ್ತುಗಳ ಈ ವಸತಿ ಸಮುಚ್ಚಯದಲ್ಲಿ 3 ಬಿಎಚ್‌ಕೆಗಳ 25 ಫ್ಲಾಟ್‌ಗಳು ಅತ್ಯುತ್ತಮವಾಗಿ ರೂಪು ಗೊಂಡಿದ್ದು, ವಿಶಾಲವಾದ ಲಾಬಿ, ಸಂದರ್ಶಕರ ಲಾಂಜ್, ಜಿಮ್ನೇಶಿಯಂ, ವೀಡಿಯೊ ಡೋರ್ ಫೋನ್ ಸಿಸ್ಟಮ್, ಸಿಸಿಟಿವಿ, ಪ್ರತೀ ಫ್ಲಾಟ್‌ಗಳಲ್ಲಿ ತ್ಯಾಜ ಸಂಸ್ಕ ರಣಾ ವಿಲೇವಾರಿ ವ್ಯವಸ್ಥೆ, ಮಕ್ಕಳ ಆಟದ ತಾಣ, ಡಬಲ್ ಎಲಿವೇಟರ್ ಹಾಗೂ ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
 

 ಅತ್ಯಾಕರ್ಷಕ, ಆಧುನಿಕ ವಿನ್ಯಾಸದ ಸುಂದರ ವಸತಿ, ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿಕೊಡುವ ಮೂಲಕ ಮಂಗಳೂರನ್ನು ಹೈಟೆಕ್ ಸಿಟಿಗಳಂತೆ ಸುಂದರ ವಾಗಿ ಮಾಡಿರುವಲ್ಲಿ ಇನ್ ಲ್ಯಾಂಡ್ ಸಂಸ್ಥೆಯ ಕಾಣಿಕೆ ಅಪಾರ. ನಗರದ ಪ್ರಗತಿ ಹಾಗೂ ಮೆರುಗನ್ನು ಇಮ್ಮಡಿಗೊಳಿಸಿರುವ ‘ಇನ್‌ಲ್ಯಾಂಡ್’ನ ಈ ಕೊಡುಗೆಯ ರೂವಾರಿ ಇನ್‌ಲ್ಯಾಂಡ್ ಸಂಸ್ಥೆಯ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್‌ರವರು. ಇವರ ಮುಂದಾಲೋಚನೆ, ಪ್ರಾಮಾಣಿಕ ಪ್ರಯತ್ನ ಮತ್ತು ಕಟ್ಟಡ ನಿರ್ಮಾಣದ ಗುಣಮಟ್ಟದಲ್ಲಿನ ಕಟ್ಟುನಿಟ್ಟಿನ ನಿಲುವು ಈ ಎಲ್ಲ ಯಶಸ್ಸಿಗೆ ಕಾರಣವಾಗಿದೆ.

‘ಇನ್‌ಲ್ಯಾಂಡ್’ನ ಪ್ರತಿಯೊಂದು ವಸತಿ ಮತ್ತು ವಾಣಿಜ್ಯ ಯೋಜನೆಗಳು ವ್ಯೆಹಾತ್ಮಕ ಹಾಗೂ ಆಕರ್ಷಕ ವಿನ್ಯಾಸಗಳ ಮೂಲಕ ಗ್ರಾಹ ಕರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿವೆೆ. ನಿರ್ಮಾಣ ಕ್ಷೇತ್ರದಲ್ಲಿ ನುರಿತ ತಜ್ಞರ ತಂಡ ವನ್ನು ನಾವು ಹೊಂದಿದ್ದು, ಅತ್ಯುತ್ತಮವಾದ ಮಾದರಿ ಕಟ್ಟಡಗಳನ್ನು ನಿರ್ಮಿಸುತ್ತೇವೆ. ಗ್ರಾಹಕರ ನಿರೀಕ್ಷೆಯ ಸಾಕಾರ, ಸಂತೃಪ್ತಿ ಇನ್‌ಲ್ಯಾಂಡ್ ಸಂಸ್ಥೆಯ ಉದ್ದೇಶ ಹಾಗೂ ಧ್ಯೇಯವಾಗಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್, ನಿರ್ದೇಶಕರಾದ ಮೆರಾಜ್ ಯೂಸುಫ್, ವಹಾಜ್ ಯೂಸುಫ್ ತಿಳಿಸಿದ್ದಾರೆ.

www.inlandbuilders.net ಹೆಚ್ಚಿನ ಮಾಹಿತಿಗೆ ಅನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News