ಕಾಸರಗೋಡು : ಖಾಸಗಿ ಬಸ್ಸು ಮಾಲಕರ ಅನಿರ್ದಿಷ್ಟಾವಧಿ ಮುಷ್ಕರ ಹಿಂದೆಗೆತ
Update: 2017-01-27 22:22 IST
ಕಾಸರಗೋಡು , ಜ.27 : ಪ್ರಯಾಣ ದರ ಏರಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಖಾಸಗಿ ಬಸ್ಸು ಮಾಲಕರು ಫೆಬ್ರವರಿ 2ರಿಂದ ನಡೆಸಲುದ್ದೇಶಿಸಿದ್ದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಿಂದೆಗೆದುಕೊಂಡಿದ್ದಾರೆ.
ಈ ಬಗ್ಗೆ ಶುಕ್ರವಾರ ಸಂಜೆ ಕೇರಳ ಸಾರಿಗೆ ಸಚಿವ ಎ. ಕೆ ಶಶೀ೦ದ್ರನ್ ರವರು ಬಸ್ಸು ಮಾಲಕರ ರಾಜ್ಯ ಸಂಘದ ಮುಖಂಡರ ಜೊತೆ ನಡೆಸಿದ ಮಾತುಕತೆ ಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು .
ಪ್ರಯಾಣ ದರ ಏರಿಕೆ ಸೇರಿದಂತೆ ಮಾಲಕರ ಎಲ್ಲಾ ಬೇಡಿಕೆಗಳ ಬಗ್ಗೆ ಅಧ್ಯಯನ ನಡೆಸಲು ಜಸ್ಟಿಸ್ ರಾಮಚಂದ್ರನ್ ಆಯೋಗ ನೇಮಿಸಲು ವರದಿ ಲಭಿಸಿದ ಬಳಿಕ ಬೇಡಿಕೆ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ಲಭಿಸಿದ ಹಿನ್ನಲೆಯಲ್ಲಿ ಮುಷ್ಕರ ಹಿಂದೆಗೆದುಕೊಳ್ಳಲಾಯಿತು