×
Ad

ಕಿನ್ನಿಗೋಳಿ : ಲಯನ್ಸ್ - ಲಯನೆಸ್ ವತಿಯಿಂದ ಪ್ರಜಾಪ್ರಭುತ್ವ ದಿನಾಚರಣೆ

Update: 2017-01-27 23:00 IST

ಮುಲ್ಕಿ , ಜ.27: ಸಂಘ ಸಂಸ್ಥೆಗಳು ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜ ಸೇವೆ ಮಾಡಿ ಮಾದರಿ ಸಂಸ್ಥೆಯಾಗಿ ಬೆಳೆಯಬೇಕು ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. 

ಅವರು  ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ಲಯನ್ಸ್ - ಲಯನೆಸ್ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೊಬೈಲ್, ವಾಟ್ಸಾಪ್ ನಿಂದ ಜನರಿಗೆ ಸಾಹಿತ್ಯದ ಒಲವು ಕಡಿಮೆಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಹಿರಿಯಸಾಹಿತಿಗಳಾದ ಮೋಹನ್‌ದಾಸ್ ಸುರತ್ಕಲ್, ಹರಿಶ್ಚಂದ್ರ ಸಾಲ್ಯಾನ್ ಮುಲ್ಕಿ, ಕೆ. ಜಿ. ಮಲ್ಯ ಕಿನ್ನಿಗೋಳಿ, ಉದಯಕುಮಾರ್ ಹಬ್ಬು, ಶಕುಂತಳಾ ಭಟ್ ಹಳೆಯಂಗಡಿ , ಡಾ. ಸೋಂದಾ ಭಾಸ್ಕರ ಭಟ್, ಉಮೇಶ್ ರಾವ್ ಎಕ್ಕಾರು, ಡಾ. ನಾರಾಯಣ ಶೆಟ್ಟಿ , ಎನ್. ಪಿ. ಶೆಟ್ಟಿ ಮುಲ್ಕಿ ಅವರನ್ನು ಸಮ್ಮಾನಿಸಲಾಯಿತು.

ನಿಕಟಪೂರ್ವ ಅಧ್ಯಕ್ಷ ಸುಧಾಕ ಶೆಟ್ಟಿ , ಲಯನೆಸ್ ಕ್ಲಬ್ ಅಧ್ಯಕ್ಷೆ ವತ್ಸಲಾ ರಾವ್, ಸವಿತಾ ಪಿ. ಶೆಟ್ಟಿ, ವೈ. ಯೋಗೀಶ್ ರಾವ್, ಮೋಹನದಾಸ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News