×
Ad

ಉಡುಪಿ ಜಿಲ್ಲಾ ಮಟ್ಟದ ಭಾರತ್ ಸ್ಕೌಟ್ ಮತ್ತು ಗೈಡ್ಸ್ ರ‍್ಯಾಲಿ

Update: 2017-01-27 23:46 IST

ಉಡುಪಿ, ಜ.27: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಉಡುಪಿ ಹಾಗೂ ಬೈಂದೂರು ಸ್ಥಳೀಯ ಸಂಸ್ಥೆ ಮತ್ತು ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಗಳ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರ‍್ಯಾಲಿ ಬೈಂದೂರು ಸಮೀಪದ ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡು ದಿನಗಳ ಕಾಲ ನಡೆಯಿತು.

ಜಿಲ್ಲಾ ರ‍್ಯಾಲಿಯನ್ನು ರಾಜ್ಯ ಉಪಾಧ್ಯಕ್ಷೆ ಶಾಂತ ವಿ.ಆಚಾರ್ಯ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಬೈಂದೂರು ಘಟಕದ ಅಧ್ಯಕ್ಷ ರಾಜು ದೇವಾಡಿಗ ವಹಿಸಿದ್ದರು.

ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ ಚಂದ್ರ ಶೆಟಿ್ಟ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಜಿಲ್ಲಾ ಮುಖ್ಯ ಆಯುಕ್ತ ಕೆ.ಬಿ.ರಾವ್, ಜಿಲ್ಲಾ ಸ್ಕೌಟ್ ಆಯುಕ್ತೆ ಎಡ್ವಿನ್ ಆಳ್ವ, ಹಿರಿಯ ಸ್ಕೌಟರ್ ರಾಜಗೋಪಾಲ ಆಚಾರ್ಯ, ಶಾಲೆಯ ಮುಖ್ಯೋಪಾಧ್ಯಾಯ ವಿಶ್ವವೇಶ ಅಡಿಗ, ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷೆ ಜ್ಯೋತಿ ಜೆ ಪೈ, ನರಸಿಂಹ ದೇವಾಡಿಗ ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯದರ್ಶಿ ಶೇಖರ್ ಪೂಜಾರಿ ಸ್ವಾಗತಿಸಿದರು , ಸ್ಥಳೀಯ ಘಟಕದ ಕಾರ್ಯದರ್ಶಿ ಮಂಜುನಾಥ್ ಹೆಗ್ಡೆ ವಂದಿಸಿದರು.

ಶಿಬಿರದ ನಾಯಕರಾದ ಕೊಗ್ಗ ಗಾಣಿಗ ಶಿಬಿರದ ಮುನ್ನೋಟ ನೀಡಿದರು. ಕಾರ್ಯಕ್ರಮವನ್ನು ಶೇಖರ್ ಗಾಣಿಕ ನಿರೂಪಿಸಿದರು.

 ಎರಡು ದಿನಗಳ ಕಾಲ ನಡೆದ ರ‍್ಯಾಲಿಯಲ್ಲಿ 500ಕ್ಕಿಂತಲೂ ಹೆಚ್ಚಿನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕಿಯರು, ಸ್ವಯಂಸೇವಕರು, ಜಿಲ್ಲೆಯ ವಿವಿಧ ತಾಲೂಕುಗಳಿಂದ ಭಾಗವಹಿಸಿದ್ದರು.

ವಿದ್ಯಾರ್ಥಿಗಳು ಚಾರಣ, ಸರ್ವಧರ್ಮ ಪ್ರಾರ್ಥನೆ, ವ್ಯ ಶಿಬಿರಾಗ್ನಿ, ಬೆಂಕಿ ಬಳಸಿ ಆಡುಗೆ, ಬೆಂಕಿ ಬಳಸದೆ ಪಾನೀಯ ತಯಾರಿ, ಮುಖವಾಡ ತಯಾರಿ, ಚಿತ್ರ ರಚನೆ, ಗ್ರೀಟಿಂಗ್ ಕಾರ್ಡ್ ತಯಾರಿ, ಸುಧಾರಿತ ವಾದ್ಯ ತಯಾರಿ, ರಸಪ್ರಶ್ನೆ, ಜನಪದ ನೃತ್ಯ, ಕಾಲೆಸುವ ತಯಾರಿ, ತೆಂಗಿನ ಗರಿಯಿಂದ ವಿವಿಧ ಆಕೃತಿ ರಚನೆ, ಧ್ವಜಸ್ತಂಭ ರಚನೆ, ಆವೆಮಣ್ಣಿನ ಆಕೃತಿ ರಚನೆ, ಬಾಂಡ್ ಪ್ರದರ್ಶನ ಮುಂತಾದ ಕಾರ್ಯಕ್ರಮಳಲ್ಲಿ ಸಕ್ರೀಯವಾಗಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News