ಅಕ್ರಮ ಮರಳುಗಾರಿಕೆ ವಿರುದ್ಧ ಡಿಸಿಗೆ ದೂರು
Update: 2017-01-27 23:54 IST
ಉಡುಪಿ, ಜ.27: ಅಕ್ರಮ ಮರಳುಗಾರಿಕೆ ತಡೆಯುಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಿಯೋಗವು ಬುಧವಾರ ಉಡುಪಿ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿದೆ.
ಉಡುಪಿ ವ್ಯಾಪ್ತಿಯ ಮಣಿಪುರ, ಮೂಡುಬೆಳ್ಳೆ, ಪಡುಬೆಳ್ಳೆ, ಸೂಡ, ಹಾವಂಜೆ, ಉದ್ಯಾವರ, ಕೊಳಲಗಿರಿ, ಸಂತೆಕಟ್ಟೆ, ಹೂಡೆ ಬ್ರಹ್ಮಾವರ ಪರಿಸರದಲ್ಲಿ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇದಕ್ಕೆ ಕೆಲವು ಅಧಿಕಾರಿಗಳು ಪರೋಕ್ಷ ಬೆಂಬಲ ನೀಡುತ್ತಿದ್ದಾರೆ. ಇದನ್ನು ಜಿಲ್ಲಾಧಿಕಾರಿಗಳೇ ಖುದ್ದು ಮುತುವರ್ಜಿ ವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಸಂತೋಷ್ ಶೆಟ್ಟಿ ಪಂಜಿಮಾರ್, ಗಣೇಶ್ ಶೆಟ್ಟಿ, ಯತೀಶ್, ಉಮೇಶ್, ಸಂತೋಷ್, ಯಶೋಧರ್ ಭಂಡಾರಿ, ಶಿವ ಭಂಡಾರಿ, ಸುರೇಶ್, ಶಿವಾನಂದ, ಶರೀಫ್ ಮೊದಲಾದವರು ಉಪಸ್ಥಿತರಿದ್ದರು.