ಉದ್ಯೋಗ ಕೊಡಿಸುವ ನೆಪದಲ್ಲಿ ಗೃಹಿಣಿಯ ಸಾಮೂಹಿಕ ಅತ್ಯಾಚಾರ ಪ್ರಕರಣ : ಓರ್ವನ ಬಂಧನ
Update: 2017-01-28 14:13 IST
ಕೊಚ್ಚಿ,ಜ.28: ಕೆಲಸ ತೆಗೆಸಿಕೊಡುವ ಭರವಸೆ ಕೊಟ್ಟು ಎರಡು ಮಕ್ಕಳ ತಾಯಿಯನ್ನು ಫ್ಲ್ಯಾಟ್‌ಗೆ ಕರೆಯಿಸಿಕೊಂಡು ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣದ ಆರೋಪಿಗಳಲ್ಲಿ ಓರ್ವನನ್ನು ಬಂಧಿಸಲಾಗಿದೆ. ಪ್ರಕರಣದ ಎರಡನೆ ಆರೋಪಿ ನಾಯರಂಬಲಂ ಅಬೀಶ್(28) ಎಂಬಾತನನ್ನು ಶುಕ್ರವಾರ ಕಲೂರ್ ಬಸ್‌ನಿಲ್ದಾಣದ ಸಮೀಪದಲ್ಲಿ ಪೊಲೀಸರು ಬಂಧಿಸಿದ್ದಾರೆ.
2016 ಡಿಸೆಂಬರ್ ನಾಲ್ಕರಂದು ಗೃಹಿಣಿಯನ್ನು ಎಂಟು ಮಂದಿ ಸೇರಿ ಅತ್ಯಾಚಾರ ನಡೆಸಿದ್ದರು. ಅತ್ಯಾಚಾರಕ್ಕೊಳಗಾದ ಮಹಿಳೆ ಇಡುಕ್ಕಿಯವಳಾಗಿದ್ದು, ಶೈನ್ ಎಂಬಾತ ಇವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಕೆಲಸಕೊಡುವುದಾಗಿ ಕರೆಸಿಕೊಂಡು ಫ್ಲ್ಯಾಟ್‌ನಲ್ಲಿ ಅತ್ಯಾಚಾರ ವೆಸಗಿದ್ದಾನೆ. ನಂತರ ತನ್ನನ್ನು ಆತನ ಗೆಳೆಯರಿಗೆ ಹಂಚಿದ್ದಾನೆ ಎಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ. ಪ್ರಕರಣಕ್ಕೆ ಸಂಬಧಿಸಿ ಈವರೆಗೆ ಅಬೀಶ್‌ನನ್ನು ಮಾತ್ರ ಬಂಧಿಸಲಾಗಿದೆ.
ಉಳಿದವರು ತಲೆ ಮರೆಸಿಕೊಂಡಿದ್ದಾರೆ ಎಂದು ಪಾಲಾರಿವಟ್ಟಂ ಪೊಲೀಸರು ತಿಳಿಸಿದ್ದಾರೆ.