×
Ad

ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಸ್ಟುವರ್ಟ್ ಲಾ

Update: 2017-01-28 14:58 IST

ಹೊಸದಿಲ್ಲಿ, ಜ.28: ಆಸ್ಟ್ರೇಲಿಯದ ಮಾಜಿ ಬ್ಯಾಟ್ಸ್‌ಮನ್ ಸ್ಟುವರ್ಟ್ ಲಾ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಶುಕ್ರವಾರ ನೇಮಕಗೊಂಡಿದ್ದಾರೆ.

ಈ ಹಿಂದೆ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿದ್ದ ಲಾ ಪ್ರಸ್ತುತ ವಿಂಡೀಸ್ ತಂಡದೊಂದಿಗೆ ಎರಡು ವರ್ಷಗಳ ಅವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

‘‘ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡಕ್ಕೆ ಕೋಚಿಂಗ್ ನೀಡುವ ಅವಕಾಶ ಲಭಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನನ್ನ ವೃತ್ತಿಜೀವನದ ಪ್ರಮುಖ ಘಟ್ಟದಲ್ಲಿ ನನಗೆ ಈ ಅವಕಾಶ ಲಭಿಸಿದೆ’’ ಎಂದು 48ರ ವಯಸ್ಸಿನ ಸ್ಟುವರ್ಟ್ ಲಾ ಪ್ರತಿಕ್ರಿಯಿಸಿದರು.

ಲಾ ಆಸ್ಟ್ರೇಲಿಯದ ಪರ 54 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದರು. ಆದರೆ, ಏಕೈಕ ಟೆಸ್ಟ್ ಪಂದ್ಯ ಆಡಿದ್ದರು. ಲಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕ್ವೀನ್ಸ್‌ಲ್ಯಾಂಡ್, ಎಸ್ಸೆಕ್ಸ್, ಲಂಕಾಶೈರ್ ಹಾಗೂ ಡೆರ್ಬಿಶೈರ್ ಪರ ಆಡಿದ್ದರು.

ಆಸ್ಟ್ರೇಲಿಯದ ದೇಶೀಯ ಕ್ರಿಕೆಟ್‌ನಲ್ಲಿ ಯಶಸ್ವಿ ನಾಯಕನಾಗಿದ್ದ ಲಾ 5 ಪ್ರಥಮ ದರ್ಜೆ ಹಾಗೂ 1 ಏಕದಿನ ಪ್ರಶಸ್ತಿಯನ್ನು ಜಯಿಸಿದ್ದರು. 367 ಪಂದ್ಯಗಳಲ್ಲಿ 27,080 ರನ್ ಗಳಿಸಿದ್ದರು. ಲಾ 1998ರಲ್ಲಿ ಆಯ್ಕೆಯಾದ ಐವರು ವರ್ಷದ ವಿಸ್ಡನ್ ಕ್ರಿಕೆಟಿಗರ ಪೈಕಿ ಓರ್ವರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News