×
Ad

ಸ್ವಾಮಿ ವಿಶ್ವಭದ್ರಾನಂದ ಶಕ್ತಿಬೋಧಿ ಪೇಸ್‌ಬುಕ್‌ಗೆ ತಡೆ

Update: 2017-01-28 15:26 IST

ತ್ರಿಶೂರ್,ಜ.28: ಸ್ವಾಮಿ ವಿಶ್ವಭದ್ರಾನಂದ ಶಕ್ತಿ ಬೋಧಿ ಫೇಸ್‌ಬುಕ್ ಖಾತೆಯನ್ನು ತಡೆಹಿಡಿಯಲಾಗಿದೆ. ಆರೆಸ್ಸೆಸಿಗರು ಫೇಸ್‌ಬುಕ್‌ಗೆ ನಿರಂತರ ದೂರು ನೀಡಿದ ಹಿನ್ನೆಲೆಯಲ್ಲಿ ಒಂದು ತಿಂಗಳವರೆಗೆ ತನ್ನ ಫೇಸ್‌ಬುಕ್ ಅವರ ಖಾತೆಯನ್ನು ರದ್ದುಪಡಿಸಲಾಗಿದೆ ಎಂದು ಶಕ್ತಿಬೋಧಿ ಆರೋಪಿಸಿದ್ದಾರೆ.

ಒಂದು ತಿಂಗಳ ಬಳಿಕ ಈ ಖಾತೆ ಮರುಚಾಲನೆಗೊಳ್ಳಲಿದೆ ಎನ್ನಲಾಗಿದ್ದರೂ ತಾನು ಹಾಗೆ ಭಾವಿಸಿಲ್ಲ ಎಂದು ತಿಳಿಸಿದ್ದಾರೆ. ಲಿಂಕ್‌ಗಳಲ್ಲಿ ತನ್ನ ಪ್ರವಚನದ ವೀಡಿಯೊಗೆ ಸಿಕ್ಕಿದ ಪ್ರಚಾರ ಗೊತ್ತಾಗುತ್ತದೆ. ಇವೆಲ್ಲ ತಿಳಿದೇ ಯಾವ ವಿವರಣೆಯೂ ಕೇಳದೆ ಖಾತೆ ತಡೆದಿರಿಸಲಾಗಿದೆ ಎಂದು ಶಕ್ತಿಬೋಧಿ ಹೇಳಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News