ಆಸ್ಟ್ರೇಲಿಯನ್ ಓಪನ್: ಸೆರೆನಾ ಚಾಂಪಿಯನ್
ಮೆಲ್ಬೋರ್ನ್, ಜ.28: ಹಿರಿಯ ಸಹೋದರಿ ವೀನಸ್ ವಿಲಿಯಮ್ಸ್‌ರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ಸೆರೆನಾ ವಿಲಿಯಮ್ಸ್ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಇಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸೆರೆನಾ ಅವರು ವೀನಸ್‌ರನ್ನು 6-4, 6-4 ಸೆಟ್‌ಗಳ ಅಂತರದಿಂದ ಮಣಿಸಿ ವೃತ್ತಿಪರ ಟೆನಿಸ್ ಯುಗದಲ್ಲಿ 23ನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 22 ಪ್ರಶಸ್ತಿ ಜಯಿಸಿರುವ ಜರ್ಮನಿಯ ಟೆನಿಸ್ ದಂತಕತೆ ಸ್ಟೆಫಿಗ್ರಾಫ್ ಸಾರ್ವಕಾಲಿಕ ಶ್ರೇಷ್ಠ ದಾಖಲೆಯನ್ನು ಮುರಿದ ಸೆರೆನಾಗೆ ಮಾರ್ಗರೆಟ್ ಕೋರ್ಟ್ ಅವರ ದೀರ್ಘಕಾಲದ ದಾಖಲೆ ಮುರಿಯಲು ಇನ್ನೊಂದು ಪ್ರಶಸ್ತಿಯ ಅಗತ್ಯವಿದೆ. ಕೋರ್ಟ್ ಅವರು 24 ಪ್ರಶಸ್ತಿಗಳನ್ನು ಜಯಿಸಿ ಗರಿಷ್ಠ ಪ್ರಶಸ್ತಿಗಳನ್ನು ಗೆದ್ದುಕೊಂಡ ಸಾಧನೆ ಮಾಡಿದ್ದಾರೆ.
ಮೆಲ್ಬೋರ್ನ್ ಪಾರ್ಕ್‌ನಲ್ಲಿ ಏಳನೆ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದ ಸೆರೆನಾ ವಿಶ್ವದ ನಂ.1 ಸ್ಥಾನವನ್ನು ಜರ್ಮನಿಯ ಕೆರ್ಬರ್‌ರಿಂದ ಮರಳಿ ಪಡೆದರು. ಸೆರೆನಾ-ವೀನಸ್ 2009ರ ಬಳಿಕ 9ನೆ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯ ಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿದ್ದಾರೆ. ವಿಲಿಯಮ್ಸ್ ಸಹೋದರಿಯರು ಫೈನಲ್‌ನಲ್ಲಿ ಸೆಣಸಾಡಿದ ಹಿರಿಯ ಆಟಗಾರ್ತಿಯರು ಎನಿಸಿಕೊಂಡರು.
‘‘ಆಕೆ(ವೀನಸ್) ಅದ್ಭುತ ವ್ಯಕ್ತಿ. ಆಕೆಯ ಬೆಂಬಲವಿಲ್ಲದಿದ್ದರೆ ನಾನು 23 ಪ್ರಶಸ್ತಿಗಳನ್ನು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ನನಗೆ ಉತ್ತಮ ಪ್ರದರ್ಶನ ನೀಡಲು ವೀನಸ್ ಸ್ಫೂರ್ತಿಯಾಗಿದ್ದಾರೆ’’ ಎಂದು ಸೆರೆನಾ ವಿಲಿಯಮ್ಸ್ ಹೇಳಿದ್ದಾರೆ.
‘‘23ನೆ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿರುವ ಸೆರೆನಾಗೆ ಅಭಿನಂದನೆಗಳು. ನಾನು ನಿನ್ನೊಂದಿಗೆ ಸದಾಕಾಲ ಇರುತ್ತೇನೆ. ನಿನ್ನ ಗೆಲುವು ಯಾವಾಗಲೂ ನನ್ನ ಗೆಲುವಾಗಿದೆ’’ ಎಂದು ವೀನಸ್ ನುಡಿದರು.
ಗ್ರಾನ್‌ಸ್ಲಾಮ್ ಕ್ವೀನ್
ಆಲ್‌ಟೈಮ್ ರೆಕಾರ್ಡ್: ಮಾರ್ಗರೆಟ್ ಕೋರ್ಟ್ 24 ಪ್ರಶಸ್ತಿ
ಓಪನ್ ಯುಗದ ಅತ್ಯಂತ ಯಶಸ್ವಿ ಸಿಂಗಲ್ಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ 23
ಸ್ಟೆಫಿ ಗ್ರಾಫ್ 22
ಹೆಲೆನ್ ವಿಲ್ಸ್ ಮೂಡಿ 19
ಕ್ರಿಸ್ ಎವರ್ಟ್ 18
ಮಾರ್ಟಿನಾ ನವ್ರಾಟಿಲೋವಾ 18
ಬಿಲ್ಲಿ ಜಿಯಾನ್ ಕಿಂಗ್ 12
ಮೋನಿಕಾ ಸೆಲೆಸ್ 09
ಜಾನ್ ಪೀರ್ಸ್-ಹೆನ್ರಿಗೆ ಡಬಲ್ಸ್ ಪ್ರಶಸ್ತಿ
ಮೆಲ್ಬೋರ್ನ್, ಜ.28: ಆಸ್ಟ್ರೇಲಿಯದ ಜಾನ್ ಪೀರ್ಸ್ ಫಿನ್‌ಲ್ಯಾಂಡ್‌ನ ಹೆನ್ರಿ ಕಾಂಟಿನೆನ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಡಬಲ್ಸ್‌ನಲ್ಲಿ ಪ್ರಶಸ್ತ್ತಿ ಜಯಿಸಿದ್ದಾರೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಜಾನ್-ಹೆನ್ರಿ ಜೋಡಿ ಪ್ರಶಸ್ತಿ ಅಮೆರಿಕದ ಅವಳಿ ಸಹೋದರರಾದ ಬಾಬ್ ಹಾಗೂ ಮೈಕ್ ಬ್ರಿಯಾನ್‌ರನ್ನು 7-5, 7-5 ನೇರ ಸೆಟ್‌ಗಳಿಂದ ಮಣಿಸಿ ಪ್ರಶಸ್ತಿ ಜಯಿಸಿದ್ದಾರೆ.
ಪ್ರಶಸ್ತಿ ಫೇವರಿಟ್‌ಗಳಾದ ಬ್ರಿಯಾನ್ ಬ್ರದರ್ಸ್ 7ನೆ ಬಾರಿ ಮೆಲ್ಬೋರ್ನ್ ಪ್ರಶಸ್ತಿ, 17ನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯ ಗುರಿ ಹಾಕಿಕೊಂಡಿದ್ದರು.
ಜಾನ್-ಹೆನ್ರಿ ಜೋಡಿ ಮೊದಲ ಬಾರಿ ಪ್ರಮುಖ ಪ್ರಶಸ್ತಿ ಜಯಿಸಿದರು. ಜಾನ್ 2001ರ ಬಳಿಕ ಆಸ್ಟ್ರೇಲಿಯನ್ ಓಪನ್ ಜಯಿಸಿದ ಆಸ್ಟ್ರೇಲಿಯದ ಮೊದಲ ಆಟಗಾರ ಎನಿಸಿಕೊಂಡರು.