×
Ad

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿಗೆ ಶೇಕಡಾ 100 ಫಲಿತಾಂಶದೊಂದಿಗೆ ನಾಲ್ಕು ರ‍್ಯಾಂಕ್

Update: 2017-01-28 17:38 IST

ಮೂಡುಬಿದಿರೆ,ಜ.28 : ಇತ್ತೀಚಿಗೆ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆಯುರ್ವೇದ ಸ್ನಾತಕೋತ್ತರ ಅಂತಿಮ ವರ್ಷದ ಪರೀಕ್ಷೆ0ುಲ್ಲಿ ಮೂಡುಬಿದ್ರೆ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಶೇಕಡಾ 100ರ ಫಲಿತಾಂಶವನ್ನು ದಾಖಲಿಸಿದೆ. ಈ ಮೂಲಕ ಆಯುರ್ವೇದ ಕಾಲೇಜಿನ ಎಲ್ಲಾ 11 ವಿಭಾಗದ 55 ವಿದ್ಯಾರ್ಥಿಗಳು ಉತ್ತಮ ಮತ್ತು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಪ್ರತ್ಯೇಕ ವಿಭಾಗಗಳಲ್ಲಿ 4 ರ್ಯಾಂಕ್ ಪಡೆದಿರುತ್ತಾರೆ.

ಕಾಯಚಿಕಿತ್ಸಾ ವಿಭಾಗದಲ್ಲಿ ಡಾ. ಆಮಲ್ ರಾಜ್ (ಪ್ರಥಮ ರ್ಯಾಂಕ್), ಅಗದ ತಂತ್ರ ವಿಭಾಗದಲ್ಲಿ ಡಾ.ದರ್ಶನ ಎಚ್. ಎಸ್ (ಪ್ರಥಮ ರ್ಯಾಂಕ್), ಭೈಷಜ್ಯ ಕಲ್ಪನಾ ವಿಭಾಗದಲ್ಲಿ ಡಾ.ಶಿಲ್ಪಾ  ಶ್ರೀಧರನ್ ನಾಯರ್ (ದ್ವಿತೀಯ ರ್ಯಾಂಕ್) ಹಾಗೂ ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ವಿಭಾಗದಲ್ಲಿ ಡಾ.ಲಕ್ಷಿ ಪಟ್ಟನ್ (ತೃತೀಯ ರ್ಯಾಂಕ್) ಪಡೆದಿರುತ್ತಾರೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ. ಮೋಹನ್ ಆಳ್ವ ವಿದ್ಯಾರ್ಥಿಗಳ ಈ ಸಾಧನೆಗೆ ರ್ಯಾಂಕ್ ವಿದ್ಯಾರ್ಥಿಗಳನ್ನು ಹಾಗೂ ಮಾರ್ಗದರ್ಶಿ ಗೈಡ್, ಪ್ರಾಧ್ಯಾಪಕ ವರ್ಗ,  ಸ್ನಾತಕೋತ್ತರ ಡೀನ್ ಹಾಗೂ ಪ್ರಾಂಶುಪಾಲರನ್ನು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News