ಪುತ್ತೂರು : ಗಾನ ನೃತ್ಯ ಸಂಭ್ರಮ ಕಾರ್ಯಕ್ರಮ
ಪುತ್ತೂರು,ಜ.28: ಸಧೃಡವಾದ ಯುವಕರ ಸಂಘ ಕಾರ್ಯಪ್ರವೃತ್ತರಾದರೆ ಅದು ಭಾರತದ ಅಭಿವೃದ್ಧಿಗೆ ಪೂರಕವಾಗುತ್ತದೆ, ಈ ನಿಟ್ಟಿನಲ್ಲಿ ವಿದ್ಯಾ ಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ಯುವಕರು ಮಾದರಿ ಕಾರ್ಯ ನಡೆಸುತ್ತಿದ್ದಾರೆ, ಇವರು ಹಮ್ಮಿಕೊಳ್ಳುವ ಪ್ರತಿಯೊಂದು ಕೆಲಸವೂ ಸಮಾಜಕ್ಕೆ ಅವಶ್ಯಕವಾದದ್ದು, ಮುಂದೆಯೂ ಇಂತಹಾ ಕಾರ್ಯದಲ್ಲಿಯೇ ಮುಂದುವರಿದು ಗ್ರಾಮದ ಅಭಿವೃದ್ಧಿಯಲ್ಲಿ ಕೈಜೋಡಿಸುವಂತಾಗಲಿ ಎಂದು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯೇಶ್ವರ ಜಾತ್ರೋತ್ಸವದ ಪ್ರಯುಕ್ತ ಆರ್ಲಪದವಿನಲ್ಲಿ ವಿದ್ಯಾಶ್ರೀ ಫೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಕಲಾ ಸಿಂಧು ಜಗದೀಶ್ ಆಚಾರ್ಯ ಪುತ್ತೂರು ಇವರ ನೇತೃತ್ವದಲ್ಲಿ ನಡೆದ ಗಾನ ನೃತ್ಯ ಸಂಭ್ರಮ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ಇದೊಂದು ಸೌಹಾರ್ದ ಸಮಾವೇಶವಾಗಿದೆ, ಇಲ್ಲಿ ಯಾವುದೇ ಬೇಧಭಾವ ಇಲ್ಲದೆ ಎಲ್ಲ ಧರ್ಮದವರಿಗೂ ಸಮಾನ ಅವಕಾಶ ನೀಡಲಾಗಿದೆ, ಉತ್ತಮ ಕೆಲಸ ಮಾಡಲು ಹಣ ಮುಖ್ಯವಲ್ಲ, ಹೃದಯ ವೈಶಾಲ್ಯತೆ ಮುಖ್ಯ. ವಿದ್ಯಾ ಶ್ರೀ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಲ್ಲಿ ಇದನ್ನು ಕಾಣಬಹುದಾಗಿದ್ದು, ಇಂದು ಜನಪ್ರತಿನಿಧಿಗಳು ಮಾಡುವ ಕೆಲಸವನ್ನು ಟ್ರಸ್ಟ್ ಮಾಡಿ ತೋರಿಸುತ್ತದೆ ಎಂದು ಟ್ರಸ್ಟ್ ನ ಕೆಲಸ ಕಾರ್ಯಗಳನ್ನು ಶ್ಲಾಘಿಸಿದರು.
ದ.ಕ.ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯ ಸಂಚಾಲಕ ಭಾಸ್ಕರ್ ಆಚಾರ್ಯ ಹಿಂದಾರು, ಬಂಟ್ವಾಳ ಬೂಡಾ ನಿರ್ಗಮನ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್,, ಉದ್ಯಮಿ ಉಪೇಂದ್ರ ಬಲ್ಯಾಯ ದೇವಸ್ಯ, ಸಾಂದೀಪನಿ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಜಯಮಾಲಾ ವಿ.ಎನ್ ಶುಭಹಾರೈಸಿದರು.
ವೇದಿಕೆಯಲ್ಲಿ ಪಾಣಾಜೆ ಗ್ರಾ.ಪಂ.ಅಧ್ಯಕ್ಷ ನಾರಾಐಣ ಪೂಜಾರಿ, ತಾ.ಪಂ.ಸದಸ್ಯೆ ಮೀನಾಕ್ಷಿ ಮಂಜುನಾಥ್, ಬೆಟ್ಟಂಪಾಡಿ ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸದಾಶಿವ ರೈ ಸೂರಂಬೈಲು, ಪಾಣಾಜೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ರವೀಂದ್ರ ಭಂಡಾರಿ, ವಿದ್ಯಾಶ್ರೀ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಮಾಧವ ಮಣಿಯಾಣಿ, ಪುತ್ತೂರು ಬ್ಲಾಕ್ ಕಾಂಗ್ರೇಸ್ ಕಾರ್ಯಕಾರಿ ಸದಸ್ಯ ಶಿವಾನಂದ ಮಣಿಯಾಣಿ,ಜಯಕುಮಾರ್ ರೈ ಕೋಟೆ ಉಪಸ್ಥಿತರಿದ್ದರು.
ಸನ್ಮಾನ; ಕಾರ್ಯಕ್ರಮದಲ್ಲಿ ಸ್ನೇಹ ಟೆಕ್ಸ್‌ಟೈಲ್ಸ್ ನ ಮಾಲಕರಾದ ವರದರಾಯ ನಾಯಕ್, ಶಿಲ್ಪಿ ಮೋಹನ್ ಜಿ.ಎಸ್, ಸೇಸಪ್ಪ ಆಚಾರ್ಯ ಪುರುಷರ ಕಟ್ಟೆ, ಸಾಂದೀಪನಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಶರತ್ ಕೆ.ಪಿ. ಇವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿ ವೇತನ ವಿತರಣೆ: ದಿವಂಗತ ಕಾವೇರಿಯಮ್ಮ ಸ್ಮರಣಾರ್ಥವಾಗಿ ಅವರ ಮೊಮ್ಮಕ್ಕಳು ಕೊಡಮಾಡಲ್ಪಟ್ಟ ವಿದ್ಯಾರ್ಥಿವೇತನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಕುಮಾರಿ ಆದಿರ ಮತ್ತು ಅದ್ವಿರಿ ರೈ ಪ್ರಾರ್ಥಿಸಿದರು. ಶ್ರೀಹರಿ ನಡುಕಟ್ಟ ಸ್ವಾಗತಿಸಿ, ಪ್ರಕಾಶ್ ಕುಲಾಲ್ ವಂದಿಸಿದರು. ಶ್ರೀಪ್ರಸಾದ್ ನಡುಕಟ್ಟ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ನಡೆದ ಕಲಾಸಿಂಧು ಜಗದೀಶ್ ಆಚಾರ್ಯ ಪುತ್ತೂರು ಬಳಗದ ಗಾನನೃತ್ಯ ಸಂಭ್ರಮದ ಹಾಡುಗಳು-ನೃತ್ಯಗಳು ನಡಯಿತು