×
Ad

31ರಂದು ಕರಾವಳಿ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ‘ಡಿಸೈನ್ ಫಿಯೆಸ್ಟಾ’

Update: 2017-01-28 18:06 IST

ಮಂಗಳೂರು, ಜ. 29: ನಗರದ ಪ್ರತಿಷ್ಠಿತ ಕರಾವಳಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕರಾವಳಿ ಕಾಲೇಜಿನ ಇಂಟೀರಿಯರ್ ಡಿಸೈನ್ ಮತ್ತು ಫ್ಯಾಶನ್ ಡಿಸೈನ್ ವಿಭಾಗಗಳ ಹಾಗೂ ಕರಾವಳಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂ.ಬಿ.ಎ ಸ್ನಾತಕೋತ್ತರ ವಿಭಾಗದ ಸಹಯೋಗದೊಂದಿಗೆ ಜ.31ರಂದುರಾಷ್ಟ್ರ ಮಟ್ಟದ ಡಿಸೈನ್ ಫಿಯೆಸ್ಟಾ 2017 ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ದೇಶದ ಯಾವುದೇ ರಾಜ್ಯದ ಪದವಿಪೂರ್ವ, ಪಾಲಿಟೆಕ್ನಿಕ್ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಗುರುತಿನ ಚೀಟಿಯೊಂದಿಗೆ ಆಗಮಿಸಿ ಪಾಲ್ಗೊಳ್ಳಬಹುದು.

ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯನ್ನು ದಿಟ್ಟವಾಗಿ ಎದುರಿಸಲು ಹಾಗೂ ಆತ್ಮಶ್ವಾಸದಿಂದ ಮುನ್ನುಗ್ಗುವ ಮನೋಭಾವವನ್ನು ಬೆಳೆಸಿಕೊಳ್ಳುವ ಉದ್ದೇಶದಿಂದ ಇಂತಹ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕರಾವಳಿ ಕಾಲೇಜು ಕಳೆದ 6 ವರ್ಷಗಳಿಂದ ರಾಷ್ಟ್ರ ಮಟ್ಟದ ಯೂತ್ ಫೆಸ್ಟ್ ಡಿಸೈನ್ ಫಿಯೆಸ್ಟಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ.

ಸ್ಪರ್ಧೆಯಲ್ಲಿ ರ್ಯಾಪ್ ಇನ್ ಸ್ಕ್ರೇಪ್, ಆರ್ಟ್ ಗ್ಯಾಲರಿ, ಇಲ್ಯುಶನ್ ಪರ್ಸ್‌ಪೆಕ್ಟಿವ್, ಸ್ಟ್ರೋಕ್ಸ್ ಇನ್ ಬ್ಲಿನ್ಕ್ಸ್, ಪ್ಲೊರಿಸ್ಟ್ರಿ, ಫ್ಯಾಶನ್ ಶೋ, ಫೋಕ್ ಡ್ಯಾನ್ಸ್, ಪೊಟೆನ್‌ಶಿಯಾ ಇತ್ಯಾದಿ ವಿಷಯಗಳಲ್ಲಿ ಸ್ಪರ್ಧೆಯು ನಡೆಯಲಿದೆ. ಸ್ಪರ್ಧೆಯ ವಿಜೇತರಿಗೆ ಸಮಗ್ರ ಪ್ರಥಮ ಪ್ರಶಸ್ತಿ ರೂ.15,000 ಮತ್ತು ಟ್ರೋಫಿ, ಸಮಗ್ರ ದ್ವಿತೀಯ ರೂ.10,000 ಮತ್ತು ಟ್ರೋಫಿ, ಸ್ಪರ್ಧೆಯ ಪ್ರತಿಯೊಂದು ವಿಷಯಗಳಲ್ಲಿ ವಿಜೇತರಿಗೆ ಪ್ರಥಮ ಬಹುಮಾನ ರೂ.1,000, ಟೋಫಿ ಮತ್ತು ಪ್ರಶಸ್ತಿ ಪತ್ರ ಹಾಗೂ ದ್ವಿತೀಯ ಬಹುಮಾನ ರೂ.500, ಟೋಫಿ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು. ಪರವೂರ ಸ್ಪರ್ಧಾರ್ಥಿಗಳಿಗೆ ಉಚಿತ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News